Top

ಮಗನ ಪುತ್ಥಳಿ ನಿರ್ಮಿಸಿ ಪ್ರತಿನಿತ್ಯ ಪೂಜಿಸುತ್ತಿರುವ ತಂದೆ!

ಮಗನ ಪುತ್ಥಳಿ ನಿರ್ಮಿಸಿ ಪ್ರತಿನಿತ್ಯ ಪೂಜಿಸುತ್ತಿರುವ ತಂದೆ!
X

ರಾಯಚೂರು: ಹೆತ್ತ ಮಗನನ್ನು ಕಳೆದುಕೊಂಡ ಪೋಷಕರೊಬ್ಬರು, ಮಗನ ಪುತ್ಥಳಿ ನಿರ್ಮಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಇಂತಹದದ್ದೊಂದು ತಂದೆ-ಮಗನ ಅಪರೂಪದ ಬಾಂಧವ್ಯಕ್ಕೆ ರಾಯಚೂರು ಸಾಕ್ಷಿಯಾಗಿದೆ.

ರಾಯಚೂರಿನ ದೇವಸುಗೂರು ಗ್ರಾಮದಲ್ಲಿ 18 ವರ್ಷಗಳ ಹಿಂದೆ ಈರಣ್ಣ ಶಿಲ್ಪಿ ಉಪ್ಪಾರ್ ಮತ್ತು ಈರಮ್ಮ ದಂಪತಿಯ ಪುತ್ರ ಮೃತಪಟ್ಟಿದ್ದ. ಕಣ್ಮರೆಯಾಗಿದ್ದ ಮಗನ ಪುತ್ಥಳಿ ನಿರ್ಮಿಸಿದ ಪೋಷಕರು ಅದಕ್ಕೆ ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

ಈರಣ್ಣ, ಈರಮ್ಮ ದಂಪತಿಯ ಪುತ್ರ 5 ವರ್ಷದವನಿದ್ದಾಗಲೇ ಅಸಾಧ್ಯವೆನಿಸುವ ಚಿತ್ರಕಲೆ ಬಿಡಿಸುವ ಕಲೆ ದೈವದತ್ತವಾಗಿ ಪಡೆದಿದ್ದ. ಆದರೆ 18 ವರ್ಷ ತುಂಬುವುದರೊಳಗಾಗಿ ಮೃತಪಟ್ಟಿದ್ದ. ಅಗಲಿದ ಮಗನ ಪುತ್ಥಳಿಯನ್ನು ಸ್ವತಃ ತಂದೆಯೇ ನಿರ್ಮಿಸಿದ್ದು, ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

ಇಂದಿನ ತಾಂತ್ರಿಕ ಯುಗದಲ್ಲಿ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಇಲ್ಲ ಅಂತಾರೆ, ಆದ್ರೆ ಹೆತ್ತ ತಂದೆ ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು ಎನ್ನೋದಕ್ಕೆ ಇದೊಂದು ಜೀವಂತ ನಿದರ್ಶನ.

Next Story

RELATED STORIES