ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್: ಕರವೇ ವಿರೋಧ

X
TV5 Kannada8 Oct 2018 7:13 AM GMT
ಪಂಚಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ವೀರ ಮಹಾದೇವಿ ಚಿತ್ರದಲ್ಲಿ ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ನಟಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಪ್ರತಿಭಟನೆ ನಡೆಸಿದ್ದು, ಸನ್ನಿ ಲಿಯೋನ್ ನಟಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿತು.
ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಪಂಚ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ವೀರ ಮಹಾದೇವಿ ಚಿತ್ರವನ್ನು ಡಿ.ಸಿ ವಾಡಿ ಉದಯನ್ ನಿರ್ಮಿಸುತ್ತಿದ್ದಾರೆ.
ಐತಿಹಾಸಿಕ ಚಿತ್ರಕ್ಕೆ ನೀಲಿ ಚಿತ್ರ ತಾರೆ ನಟಿಸಲು ನಿರ್ಮಾಪಕ ಉದಯನ್ ಅವಕಾಶ ನೀಡಬಾರದು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಸನ್ನಿ ಲಿಯೋನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟಿಸಿದರು.
Next Story