Top

ಗಣಪತಿ ವಿಸರ್ಜನೆಯಲ್ಲಿ ಶಾಸಕ ರೇಣುಕಾಚಾರ್ಯ ಸಖತ್ ಸ್ಟೆಪ್‌

ಗಣಪತಿ ವಿಸರ್ಜನೆಯಲ್ಲಿ ಶಾಸಕ ರೇಣುಕಾಚಾರ್ಯ ಸಖತ್ ಸ್ಟೆಪ್‌
X

ದಾವಣಗೆರೆ: ನಗರದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ರೇಣುಕಾಚಾರ್ಯ, ಸಾವಿರಾರು ಜನರ ನಡುವೆ, ಕುಣಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಗಣೇಶನ ವಿಸರ್ಜನೆಗೆ ಆಗಮಿಸಿದ ಅವರು, ನೆರೆದಿದ್ದ ಜನರನ್ನು ಕಂಡ, ರೇಣುಕಾಚಾರ್ಯ ಖುಷಿಯಾಗಿ ಕೇಸರಿ ಶಾಲು ಧರಿಸಿ ಯುವಕರಂತೆ ನೃತ್ಯ ಮಾಡಿದ್ದಾರೆ. ಡೊಳ್ಳು ಬಾರಿಸಿ ಜನರೊಂದಿಗೆ ನರ್ತಿಸಿದ ರೇಣುಕಾಚಾರ್ಯ ಡ್ಯಾನ್ಸ್ ಮಾಡುತ್ತಾ ಹುಚ್ಚೆದ್ದು ಕುಣಿದರು.

ಇವರು ಕುಣಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಎಲ್ಲೆಡೆ ಎಂ.ಪಿ.ರೇಣುಕಾಚಾರ್ಯ ಸ್ಟೆಪ್ ಹಾಕಿದ ವಿಡಿಯೋ ಸದ್ದು ಮಾಡುತ್ತಿದೆ.

Next Story

RELATED STORIES