Top

ಭಾರತಕ್ಕೆ ಅಪ್ಪಳಿಸಲಿದೆ ಅಪಾಯಕಾರಿ ಬಿಸಿಗಾಳಿ!

ಭಾರತಕ್ಕೆ ಅಪ್ಪಳಿಸಲಿದೆ ಅಪಾಯಕಾರಿ ಬಿಸಿಗಾಳಿ!
X

2015ರಲ್ಲಿ 2500 ಜನರನ್ನು ಬಲಿ ತೆಗೆದುಕೊಂಡ ಅಪಾಯಕಾರಿ ಬಿಸಿಗಾಳಿ ಈ ಬಾರಿ ಭಾರತದಲ್ಲಿ ಮತ್ತೊಮ್ಮೆ ಕಾಣಿಸಲಿದೆ ಎಂದು ಹವಾಮಾನ ವೈಪರಿತ್ಯ ಕುರಿತ ವರದಿ ಆತಂಕ ವ್ಯಕ್ತಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ತೀವ್ರಗತಿಯಲ್ಲಿ ಆಗುತ್ತಿದ್ದು, ಕನಿಷ್ಠ 2 ಸೆಲ್ಸಿಯಸ್ ಡಿಗ್ರಿ ಉಷ್ಣಾಂಶದಲ್ಲಿ ಏರಿಕೆಯಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಲಾದ ಆಂತರಿಕ ಸರಕಾರಗಳ ಹವಾಮಾನ ಬದಲಾವಣೆ ವರದಿ ತಿಳಿಸಿದೆ.

ಡಿಸೆಂಬರ್​ನಲ್ಲಿ ಪೋಲೆಂಡ್​ನ ಕಟೊವಿಸಿಯಲ್ಲಿ ನಡೆಯಲಿರುವ ಹವಾಮಾನ ಬದಲಾವಣೆ ಕುರಿತು ಸಮ್ಮೇಳನದಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗುವ ಸಾಧ್ಯತೆ ಇದೆ. ಅಲ್ಲದೇ ಪ್ಯಾರಿಸ್ ಒಪ್ಪಂದಗಳ ಅನುಷ್ಠಾನ ಕುರಿತು ಮರುಪರಿಶೀಲನೆ ನಡೆಯಲಿದೆ. ವಿಶೇಷ ಅಂದರೆ ಈ ಸಮ್ಮೇಳನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ದಟ್ಟವಾಗಿದೆ.

ಹವಾಮಾನ ವೈಪರಿತ್ಯ ಈಗ ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ಕರೆಗಂಟೆ ಬಾರಿಸುತ್ತಿದೆ. ಪ್ರಸ್ತುತ 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಸರಾಸರಿ 2030ರ ವೇಳೆಗೆ ದಾಟುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ 2050ರ ವೇಳೆಗೆ ಇದು ಇನ್ನಷ್ಟು ಏರಿಕೆಯಾಗಲಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ಕೋಲ್ಕತಾ ಮತ್ತು ಕರಾಚಿ ಅತೀ ಹೆಚ್ಚು ಬಿಸಿಗಾಳಿಗೆ ತುತ್ತಾಗಲಿರುವ ನಗರಗಳಾಗಿವೆ. ಮೂಲಗಳ ಪ್ರಕಾರ ಭಾರತ 929 ದಶಲಕ್ಷ ಟನ್ ಕಾರ್ಬೊನ್ ಡಯಾಕ್ಸೈಡ್ ಉತ್ಪತ್ತಿ ಮಾಡುತ್ತಿದೆ. ಇದರಲ್ಲಿ ಶೇ.79ರಷ್ಟು ಭಾಗ ವಿದ್ಯುತ್​ ಉತ್ಪಾದನೆಯಿಂದ ಆಗುತ್ತಿದ್ದು, ಥರ್ಮಕೋಲ್ ವಿದ್ಯುತ್ ಸ್ಥಾವರದಿಂದ ಆಗುತ್ತಿದೆ ಎಂದು ವರದಿ ಆರೋಪಿಸಿದೆ.

Next Story

RELATED STORIES