Top

ದಿ ವಿಲನ್ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್‌

ದಿ ವಿಲನ್ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್‌
X

ಬೆಂಗಳೂರು: ಬಹುನಿರೀಕ್ಷಿತ ದಿ ವಿಲನ್ ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದೆ. ಅಕ್ಟೋಬರ್ 18ಕ್ಕೆ ಸಾವಿರಾರು ಸ್ಕ್ರೀನ್​ಗಳಲ್ಲಿ ತೆರೆಗಪ್ಪಳಿಸ್ತಿರುವ ದಿ ವಿಲನ್ ಸಿನಿಮಾನ ಸ್ವಾಗತಿಸೋಕೆ ಭರ್ಜರಿ ತಯಾರಿ ನಡೀತಿದೆ.

ಪ್ರೇಕ್ಷಕರನ್ನ ಥಿಯೇಟರ್​ಗೆ ಸ್ವಾಗತಿಸೋಕೆ ಶಿವಣ್ಣ, ಸುದೀಪ್​ರ ಅದ್ದೂರಿ ಕಟೌಟ್​ಗಳು ನಿರ್ಮಾಣವಾಗ್ತಿದೆ. ಈಗಾಗಲೇ ಪಾಂಡು ಅಂಡ್ ಟೀಮ್​ ದಿ ವಿಲನ್ ಕಟೌಟ್​ಗಳನ್ನ ರೆಡಿ ಮಾಡ್ತಿದ್ದಾರೆ.

ಶಿವಣ್ಣ ಮತ್ತು ಸುದೀಪ್​ ಅವರ ದಿ ವಿಲನ್ ಸಿನಿಮಾದ ಖಡಕ್ ಲುಕ್​​ನ 60 ಅಡಿಗಳ ತಲಾ 60 ಕಟೌಟ್​ಗಳು ನಿರ್ಮಾಣವಾಗ್ತಿದೆ.

ಇನ್ನೆರಡು ದಿನಗಳಲ್ಲಿ ಕಟೌಟ್​ಗಳಿಗೆ ಅಂತಿಮ ರೂಪ ಸಿಗಲಿದ್ದು, ಒಂದು ದಿನ ಮೊದಲೇ ಥಿಯೇಟರ್​ಗಳ ಮುಂದೆ ರಾರಾಜಿಸಲಿದೆ.

Next Story

RELATED STORIES