Top

ಜೆಡಿಎಸ್ ಪಕ್ಷದ ಟಿಕೆಟ್‌ಗಾಗಿ ಮಂಡ್ಯದಲ್ಲಿ ಫೇಸ್‌ಬುಕ್ ವಾರ್

ಜೆಡಿಎಸ್ ಪಕ್ಷದ ಟಿಕೆಟ್‌ಗಾಗಿ ಮಂಡ್ಯದಲ್ಲಿ ಫೇಸ್‌ಬುಕ್ ವಾರ್
X

ಮಂಡ್ಯ: ಮಂಡ್ಯ ಲೋಕಸಭೆ ಉಪಚುನಾವಣೆ ಹಿನ್ನೆಲೆ, ಜೆಡಿಎಸ್ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದೆ. ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡುವಂತೆ ಸ್ಥಳೀಯ ಶಾಸಕರು ಮತ್ತು ಮುಖಂಡರು ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಮೇಗೌಡರನ್ನ ಅಭ್ಯರ್ಥಿ ಮಾಡುವಂತೆ ಚರ್ಚೆ ನಡೆಸಿದ್ದು, ನಿವೃತ್ತ ಐಆರ್‌ಎಸ್ ಅಧಿಕಾರಿಗಳಾದ ಲಕ್ಷ್ಮೀ ಅಶ್ವಿನ್ ಗೌಡ ಮತ್ತು ಸಂತೋಷ್ ತಮ್ಮಣ್ಣ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಆಕಾಂಕ್ಷಿಗಳ ಪೈಕಿ ಎಲ್.ಆರ್.ಶಿವರಾಮೇಗೌಡ ಪ್ರಬಲ ಅಭ್ಯರ್ಥಿಯಾಗಿದ್ದು, ನಾಗಮಂಗಲದಲ್ಲಿ ಸುರೇಶ್ ಗೌಡರ ಗೆಲುವಿಗೆ ಶ್ರಮಿಸಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಎಲ್.ಆರ್.ಶಿವರಾಮೇಗೌಡ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ.

ಇನ್ನು ಶಿವರಾಮೇಗೌಡರ ಬೆಂಬಲಿಗರು ಮತ್ತು ಲಕ್ಷ್ಮೀ ಅಶ್ವಿನ್ ಗೌಡ ಬೆಂಬಲಿಗರು ಫೇಸ್‌ಬುಕ್ ವಾರ್ ನಡೆಸಿದ್ದು, ಜಟಾಪಟಿ ಏರ್ಪಟ್ಟಿದೆ.

ಲಕ್ಷ್ಮೀ ಬೆಂಬಲಿಗರಿಗೆ ಪ್ರಶ್ನಿಸಿರುವ ಎಲ್.ಆರ್.ಎಸ್‌ ಬೆಂಬಲಿಗರು, ಯಾರು ಲಕ್ಷ್ಮಿ ಅಶ್ವಿನ್ ಗೌಡ, ಜೆಡಿಎಸ್ ಪಕ್ಷಕ್ಕೆ ಅವರ ಕೊಡುಗೆ ಏನು? ನಿನ್ನೆ ಮೊನ್ನೆ ಬಂದೋರೆಲ್ಲಾ ಜೆಡಿಎಸ್ ಟಿಕೆಟ್ ಕೇಳೋಹಾಗಾದ್ರು ಎಂದು ಹೇಳಿದ್ದಾರೆ.

ಇದಕ್ಕೆ ತಿರಗೇಟು ನೀಡಿದ ಲಕ್ಷ್ಮೀ ಬೆಂಬಲಿಗರು ತಿರುಗೇಟು ನೀಡಿದ್ದು, ಶಿವರಾಮೇಗೌಡಗೆ ಠೇವಣಿ ಸಹ ಸಿಗಲ್ಲವೆಂದಿದ್ದು, ಕೊಟ್ಟ ಮಾತಿನಂತೆ ಜೆಡಿಎಸ್ ಲಕ್ಷ್ಮಿ ಗೆ ಟಿಕೆಟ್ ಕೊಡಬೇಕೆಂದು ಬೆಂಬಲಿಗರು ಆಗ್ರಹಿಸಿದ್ದಾರೆ.

Next Story

RELATED STORIES