Top

'ಜೆಡಿಎಸ್‌ಗೆ ಹೇಗೆ ನಡೆದುಕೊಳ್ಳಬೇಕೆಂದು ಗೊತ್ತಿಲ್ಲ'

ಜೆಡಿಎಸ್‌ಗೆ ಹೇಗೆ ನಡೆದುಕೊಳ್ಳಬೇಕೆಂದು ಗೊತ್ತಿಲ್ಲ
X

ಮಂಡ್ಯ: ಲೋಕಸಭೆ ಉಪಚುನಾವಣೆ ಕುರಿತಂತೆ ಮಾತನಾಡಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಿತ್ರ ಪಕ್ಷ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ನಾನು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಆಗಲ್ಲ ಎಂದು ಹೇಳಿದ್ದೇನೆ ವಿನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಕಲ್ಲ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಈ ಬಗ್ಗೆ ರಾಜ್ಯ ನಾಯಕರು ಸಹ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದೇವೇಗೌಡರೇ ಈ ಹಿಂದೆ ಮೈತ್ರಿ ವಿಧಾನಸಭೆಗೆ ಸೀಮಿತ ಎಂದಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮೈತ್ರಿ ಸರ್ಕಾರ ಇದೆ ಎಂಬ ಅರಿವಿಲ್ಲ. 80 ಸೀಟು ಗೆದ್ರು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿದ್ದೇವೆ. ಹೇಗೆ ನಡೆದುಕೊಳ್ಳಬೇಕೆಂಬ ನಡವಳಿಕೆ ಜೆಡಿಎಸ್‌ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ಕಾಂಗ್ರೆಸ್ ಪಕ್ಷ ಬಿಟ್ಟು ಕೊಟ್ಟಿರುವ ಸಿಎಂ ಹುದ್ದೆಯನ್ನು ಹೇಗೆ ನಡೆಸ್ತಿದ್ದಾರೆ ಎಂದು ಜನ ನೋಡ್ತಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜೆಡಿಎಸ್ ಶಾಸಕರ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಜೆಡಿಎಸ್‌ನವ್ರು ಮಾತೆತ್ತಿದ್ರೆ ಮಂಡ್ಯದಲ್ಲಿ ಏಳು ಸೀಟು ಗೆದ್ದಿದ್ದೇವೆ ಅಂತಾರೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಐದು MLA ಸೀಟು ಗೆದ್ದಿದ್ದ ನೀವು ರಮ್ಯಾ ವಿರುದ್ದ ಸೋಲಲಿಲ್ವಾ ಎಂದು ಜೆಡಿಎಸ್ ಪಕ್ಷಕ್ಕೆ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ಮಂಡ್ಯ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಅಭ್ಯರ್ಥಿ ಹಾಕಲೇಬೇಕೆಂದು ಪಟ್ಟು ಹಿಡಿದಿರುವ ಚಲುವರಾಯಸ್ವಾಮಿ, ವಿಧಾನಸಭೆಯಲ್ಲಿ ಏಳಕ್ಕೆ ಏಳು ಗೆದ್ದ ಮಾತ್ರಕ್ಕೆ ಜನ ಲೋಕಸಭೆಯಲ್ಲಿ ಸುಲಭವಾಗಿ ಗೆಲ್ಲಿಸಲ್ಲ. ಜೆಡಿಎಸ್ ಬಲಿಷ್ಠವಾಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಂಡ್ಯದಲ್ಲಿ ಗೆದ್ದ ಇತಿಹಾಸ ಇದೆ. ಸಿದ್ದರಾಮಯ್ಯ, ಗುಂಡೂರಾವ್ ಮುಂದೆ ಅಭ್ಯರ್ಥಿ ಹಾಕಲೇಬೇಕೆಂದು ಒತ್ತಡ ಹಾಕುವೆ ಎಂದು ಹೇಳಿದ್ದಾರೆ.

Next Story

RELATED STORIES