Top

ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಿಟ್ನೆಸ್ ಸೀಕ್ರೇಟ್ ರಿವೀಲ್

ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಿಟ್ನೆಸ್ ಸೀಕ್ರೇಟ್ ರಿವೀಲ್
X

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಫಿಟ್ನೆಸ್ ಸೀಕ್ರೇಟ್‍ವೊಂದು ರಿವೀಲ್ ಆಗಿದೆ.

ಏಳು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದಾಗ ಕೊಹ್ಲಿ ಫಿಟ್ ಆಗಿರಲಿಲ್ಲ.

ನಂತರ ವರ್ಷಗಟ್ಟಲೆ ಟ್ರೇನಿಂಗ್, ತ್ಯಾಗ, ಪರಿಶ್ರಮ ಪರಿಣಾಮವಾಗಿ ವಿರಾಟ್ ಕೊಹ್ಲಿ ಇಂದು ಫಿಟೆಸ್ಟ್ ಅಥ್ಲೀಟ್ ಅಂತ ಕರೆಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದಾಗ ವಿರಾಟ್ ಕೊಹ್ಲಿಗೆ ಬಿರಿಯಾನಿ ಅಂದ್ರೆ ಪಂಚಪ್ರಾಣವಾಗಿತ್ತು. ಯಾವಾಗ ಜಿಮ್ ಕಡೆ ಕೊಹ್ಲಿ ಮುಖಮಾಡಿದ್ರೊ ಅಂದಿನಿಂದ ತಮ್ಮ ನೆಚ್ಚಿನ ಬಿರಿಯಾನಿಯನ್ನ ಮರೆತು ಬಿಟ್ರು.

ಫಿಟ್ನೆಸ್‍ನಿಂದ ಕ್ಯಾಪ್ಟನ್ ಕೊಹಿಯಲ್ಲಿ ಬದಲಾವಣೆ ಕಂಡಿತು. ಫಿಟ್ನೆಸ್‍ಗಾಗಿ ಕೊಹ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದಾಗ ಮಾಂಸಾಹಾರ ಸೇವನೆಯಿಂದ ದೂರ ಉಳಿದರು.

ಕೊಹ್ಲಿ ಇವೆಲ್ಲವನ್ನ ಬಿಟ್ಟು ತರಕಾರಿ ಮತ್ತು ಸೋಯಾದಂತ ಪದಾರ್ಥಗಳನ್ನ ಸೇವಿಸಿದ್ರು. ಎರಡು ವರ್ಷಗಳ ಹಿಂದೆ ಕೊಹ್ಲಿ ನಾರ್ಮಲ್ ಡಯಟ್‍ನಲ್ಲಿದ್ರು. ಆ ಸಂದರ್ಭದಲ್ಲಿ ಸಸ್ಯಹಾರಿ ಆಗಲು ಸಿದ್ದ ಎಂದು ಕೊಹ್ಲಿ ಹೇಳಿದ್ರು.

ಇದೀಗ ಕೊಹ್ಲಿ ಸಸ್ಯಹಾರಿಯಾಗಿ ಫಿಟ್ಟೆಸ್ಟ್ ಅಥ್ಲೀಟ್ ಆಗಿದ್ದು ಹೊಸ ರೀತಿಯ ಜೀವನಕ್ಕೆ ಹೊಂದಿಕೊಂಡು ಫಿಟ್‍ನೆಸ್‍ನಲ್ಲಿ ಸಾಕಷ್ಟು ಸುಧಾರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Next Story

RELATED STORIES