ಛತ್ತೀಸ್ಗಡ, ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು?

ನವದೆಹಲಿ : ಎಬಿಪಿ ಸಿ-ವೋಟರ್ ಸಮೀಕ್ಷೆಯ ಬೆನ್ನಲ್ಲೇ, ಇದೀಗ ಟೌಮ್ಸ್ ನೌ ವಾರ್ ರೂಂ ಸ್ಟ್ರಾಟಜಿಸ್ ಸಮೀಕ್ಷೆ ಮತ್ತೊಂದು 3 ರಾಜ್ಯಗಳ ಚುನಾವಣಾ ಪೂರ್ವ ಸಮೀಕ್ಷೆಯನ್ನು ಬಿಡುಗಡೆಗೊಳಿಸಿದೆ.
ಟೌಮ್ಸ್ ನೌ ವಾರ್ ರೂಂ ಸ್ಟ್ರಾಟಜಿಸ್ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಬಿಜೆಪಿ ಮತ್ತೆ ಗೆಲುವು ಸಾಧಿಸುತ್ತದೆ ಎಂದು ಹೇಳಲಾಗುತ್ತಿದೆ.
ಟೌಮ್ಸ್ ನೌ ವಾರ್ ರೂಂ ಸ್ಟ್ರಾಟಜಿಸ್ ಸಮೀಕ್ಷೆಯ ಪ್ರಕಾರ, ಮಧ್ಯಪ್ರದೇಶದ 230 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಈ ಬಾರಿ 142 ಸ್ಥಾನಗಳನ್ನು, ಕಾಂಗ್ರೆಸ್ 77, ಇತರೆ 11 ಸ್ಥಾನ ಗಳಿಸಲಿದೆ.
ಅದೇ ಸಿ-ವೋಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ 108 ಸ್ಥಾನ, ಕಾಂಗ್ರೆಸ್ಗೆ 122 ಗಳಿಸಲಾಗುತ್ತದೆ ಎಂದು ಹೇಳಲಾಗಿದೆ.
ಇನ್ನೂ ಛತ್ತೀಸ್ಗಡದಲ್ಲಿ 90 ಲೋಕಸಭಾ ಸ್ಥಾನಗಳ ಪೈಕಿ, ಬಿಜೆಪಿ 47, ಕಾಂಗ್ರೆಸ್ 33 ಹಾಗೂ ಇತರರು 10 ಸ್ಥಾನ ಪಡಲಿದ್ದಾರೆ ಎಂದು ತಿಳಿಸಿದೆ.
2013ರಲ್ಲಿ 49 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಎರಡು ಸ್ಥಾನಗಳನ್ನು ಕಳೆದುಕೊಂಡರೇ, 39 ಸ್ಥಾನ ಗಳಿಸಿದ್ದ ಕಾಂಗ್ರೆಸ್ 33 ಸ್ಥಾನ ಪಡೆಯುವ ಮೂಲಕ 6 ಸ್ಥಾನ ಕಳೆದುಕೊಳ್ಳಲಿದೆ ಎಂದಿದೆ.
ಈ ಮೂಲಕ ಛತ್ತೀಸ್ಗಡ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಲಿದೆ. ಮತ್ತೆ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌವ್ ವಾರ್ ರೂಂ ಸ್ಟ್ರಾಟಜಿಸ್ ಸಮೀಕ್ಷೆ ತಿಳಿಸಿದೆ.
ಇತ್ತ ರಾಜಸ್ಥಾನದಲ್ಲಿನ 200 ಸ್ಥಾನಗಳಲ್ಲಿ ಬಿಜೆಪಿ 75, ಕಾಂಗ್ರೆಸ್ 115 ಸ್ಥಾನ ಮತ್ತು ಇತರರು 10 ಸ್ಥಾನ ಪಡೆಯಲಿದ್ದಾರೆ ಎಂದು ಹೇಳಿದೆ.
2013ರಲ್ಲಿ 163 ಸ್ಥಾನ ಗೆದ್ದಿದ್ದ ಬಿಜೆಪಿ, 2018ರ ಚುನಾವಣೆ ವೇಳೆಗೆ 88 ಸ್ಥಾನಗಳನ್ನು ಕಳೆದುಕೊಂಡು ಕುಸಿತಗೊಳ್ಳಲಿದೆ. ಅದೇ ಕಾಂಗ್ರೆಸ್ 21 ಸ್ಥಾನಗಳನ್ನು ಗಳಿಸಿದ್ದರೇ, 115 ಸ್ಥಾನಕ್ಕೆ ಏರಿಕೆ ಕಂಡು 94 ಏರಿಕೆ ಕಾಣುವ ನಿರೀಕ್ಷೆ ಇದೆ ಎಂದಿದೆ.
ಒಟ್ಟಾರೆಯಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್ಗಳದಲ್ಲಿ ಕಮಲ ಅರಳುವ ನಿರೀಕ್ಷೆಯನ್ನು, ರಾಜಸ್ಥಾನದಲ್ಲಿ ಕೈ ಹೊರ ಮೂಡುವ ಗುರುತನ್ನು ಟೈಮ್ಸ್ ನೌ ವಾರ್ ರೂಂ ಸ್ಟ್ರಾಟಜಿಸ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
- 2019 Lok Sabha elections 2019 loksabha election Chhattisgarh kannada news today karnataka news today latest karnataka news Lok Sabha Madhya Pradesh opinion poll Opinion poll survey pre poll opinion survey rajastan times now timews now opinion poll survey topnews tv5 kannada tv5 kannada live tv5 kannada news tv5 live