Top

ಯಾರಂದ್ರೆ ಅವ್ರಿಗೆ ಡ್ರಾಪ್ ಕೊಡೋ‌ ಮುನ್ನ ಎಚ್ಚರ..!

ಯಾರಂದ್ರೆ ಅವ್ರಿಗೆ ಡ್ರಾಪ್ ಕೊಡೋ‌ ಮುನ್ನ ಎಚ್ಚರ..!
X

ಯಾರಂದ್ರೆ ಅವರಿಗೆ‌ ನೀವು ಡ್ರಾಪ್ ಕೊಡ್ತೀರಾ ? ಹಾಗಿದ್ರೆ ಸ್ವಲ್ಪ ಹುಷಾರು..ಹೋಗಲಿ ಪಾಪ ಅಂತಾ‌ ನೀವು ಇನ್ನಿತರರಿಗೆ ಡ್ರಾಪ್ ಕೊಡಲು ಹೋದ್ರೆ ಕೊನೆಗೆ‌ ನಿಮಗೇ ಚಿಪ್ಪು ಸಿಗಬಹುದು. ಯಾಕೆ ಅನ್ನೋದನ್ನ ಹೇಳ್ತೀವಿ ಕೇಳಿ

ಬೆಂಗಳೂರಿನಲ್ಲಿ ಡ್ರಾಪ್ ಕೊಟ್ಟ ತಪ್ಪಿಗೆ ಮಾಲೀಕನೊಬ್ಬ ತನ್ನ ಕಾರನ್ನು ಕಳೆದುಕೊಂಡಿದ್ದಾನೆ. ಮದ್ಯಪಾನ ಮಾಡಿ ಬಾರ್‌ನಿಂದ ಬರುತ್ತಿದ್ದಾಗ ಅಪರಿಚಿತನೊಬ್ಬ ವೇಲು ಎಂಬುವವರ ಕಾರನ್ನು ಅಡ್ಡ ಹಾಕಿ ಡ್ರಾಪ್ ಕೇಳಿದ್ದಾನೆ. ನಾಗವಾರ ಸಿಗ್ನಲ್ ಬಳಿ ಡ್ರಾಪ್ ಮಾಡುವಂತೆ ಅಪರಿಚಿತ ಕೇಳಿಕೊಂಡಿದ್ದಾನೆ. ವೀರಣ್ಣಪಾಳ್ಯ ಬಳಿ ಬರುತ್ತಿದ್ದಂತೆ ಇಲ್ಲೇ ಇಳಿಯೋದಾಗಿ ಹೇಳಿ ಇಳಿದುಕೊಂಡಿದ್ದಾನೆ.

ಇದಾದ ಬಳಿಕ ನಡೆದಿದ್ದೇ ಹೈಡ್ರಾಮಾ ಕಾರಿನಿಂದ ಕೆಳಗಿಳಿದ ಅಪರಿಚಿತ, ವೇಲು ಅವರಿಗೆ ನಿಮ್ಮ ಕಾರಿಗೆ ಯಾರೋ ಗುದ್ದಿದ್ದಾರೆ ಎಂದಿದ್ದಾನೆ. ಏನೆಂದು ನೋಡಲು ವೇಲು ಕೆಳಗಿಳಿದಾಗ ಅಷ್ಟರಲ್ಲಿ ಅಪರಿಚಿತ ಯುವಕ ಕಾರ್ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ಕಾರನ್ನು ಓಡಿ ಹಿಂಬಾಲಿಸಲಾಗದ ವೇಲು ಇದೀಗ ಹೆಣ್ಣೂರು ಪೊಲೀಸ್ ಠಾಣೆಗೆ ಬಂದು ಕಾರನ್ನು ಹುಡುಕಿಕೊಡುವಂತೆ‌ ದೂರು ನೀಡಿದ್ದಾರೆ.

Next Story

RELATED STORIES