Top

ಹಲ್ಲೆಗೆ ಹೆದರಿ ಗುಜರಾತ್ ತೊರೆದ 50 ಸಾವಿರ ಕಾರ್ಮಿಕರು!

ಹಲ್ಲೆಗೆ ಹೆದರಿ ಗುಜರಾತ್ ತೊರೆದ 50 ಸಾವಿರ ಕಾರ್ಮಿಕರು!
X

ಮಗುವಿನ ಮೇಲಿನ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಹೊರ ರಾಜ್ಯದವರ ಮೇಲೆ ಸಾಮೂಹಿಕ ಹಲ್ಲೆ ಪ್ರಕರಣಗಳಿಂದ ಭೀತರಾದ ಹೊರರಾಜ್ಯದ ಸುಮಾರು 50 ಸಾವಿರ ಕಾರ್ಮಿಕರು ಗುಜರಾತ್​ ತೊರೆದಿದ್ದಾರೆ.

ಸಬರಕಾಂತ್ ಜಿಲ್ಲೆಯಲ್ಲಿ ಭಾನುವಾರ 14 ತಿಂಗಳ ಹಸುಗೂಸಿನ ಮೇಲೆ ಬಿಹಾರಿಯೊಬ್ಬ ಅತ್ಯಾಚಾರ ಮಾಡಿದ್ದ. ಈ ಸಂಬಂಧ ಪೊಲೀಸರು ಆತನನ್ನು ಬಂಧಿಸಿದ್ದರೂ ಹೊರ ರಾಜ್ಯದವರ ಮೇಲೆ ಸ್ಥಳೀಯರ ಆಕ್ರೋಶ ಕೆರಳಿಸಿದ್ದು, ಇದು ರಾಜ್ಯದ ನಾನಾ ಕಡೆ ವಿಸ್ತರಣೆಯಾಗಿದೆ.

ಸ್ಥಳೀಯರು ಹೊರರಾಜ್ಯದವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಸುಮಾರು 354 ಮಂದಿಯನ್ನು ಬಂಧಿಸಿದ್ದಾರೆ.

ಗುಜರಾತ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರದ ಜನರು ಉದ್ಯೋಗ ಸೇರಿದಂತೆ ನಾನಾ ಕಾರಣಗಳಿಗಾಗಿ ವಾಸವಾಗಿದ್ದಾರೆ.

ಭಾನುವಾರ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅನ್ಯ ರಾಜ್ಯದವರ ಮೇಲೆ ಸ್ಥಳೀಯರನ್ನು ಕೆರಳಿಸಿದೆ. ಅನ್ಯ ರಾಜ್ಯದವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಯ ಸಂದೇಶಗಳು ರವಾನೆಯಾಗಿದ್ದು, ರಾಜ್ಯದ ನಾನಾ ಕಡೆ ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ.

ಸುಮಾರು 6 ರಾಜ್ಯಗಳಲ್ಲಿ ಅನ್ಯ ರಾಜ್ಯದವರ ಸುಮಾರು 42 ಹಲ್ಲೆ ಪ್ರಕರಣಗಳು ವರದಿಯಾಗಿವೆ. ಈ ಸಂಬಂಧ 342 ಬಂಧಿಯನ್ನು ಬಂಧಿಸಲಾಗಿದೆ, ಶೀಘ್ರದಲ್ಲೇ ಇನ್ನಷ್ಟು ಮಂದಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ ಶಿವಾನಂದ್ ಜಾ ತಿಳಿಸಿದ್ದಾರೆ.

ಗುಜರಾತ್​ನಲ್ಲಿ ಹೊರರಾಜ್ಯದವರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣದಿಂದ ಉತ್ತರ ಪ್ರದೇಶ ಹಾಗೂ ಬಿಹಾರದ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ರಕ್ಷಣೆಗೆ ಬಾರದ ಪ್ರಧಾನಿ ಮೋದಿ ಮೌನವಾಗಿದ್ದಾರೆ. ವಾರಣಾಸಿಯಲ್ಲಿ ಅವರು ಚುನಾವಣೆಗೆ ಬರಬೇಕು. ಆಗ ಕೇಳುತ್ತೇವೆ ಎಂದಿದ್ದಾರೆ.

Next Story

RELATED STORIES