Top

ಗ್ರಾ.ಪಂ.ಸದಸ್ಯನಿಗೆ ಗಣಿ ಮಾಲೀಕನಿಂದ ಪ್ರಾಣ ಬೆದರಿಕೆ

ಗ್ರಾ.ಪಂ.ಸದಸ್ಯನಿಗೆ ಗಣಿ ಮಾಲೀಕನಿಂದ ಪ್ರಾಣ ಬೆದರಿಕೆ
X

ಚಿಕ್ಕಮಗಳೂರು: ಅಕ್ರಮ ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಗ್ರಾಮ ಪಂಚಾಯತ್ ಅಧ್ಯಕ್ಷನಿಗೆ ಗಣಿ ಮಾಲೀಕ ಪ್ರಾಣ ಬೆದರಿಕೆ ಹಾಕಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ್

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೇಲೇನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ್‌ಗೆ ಗಣಿ ಮಾಲೀಕ ಅರುಣ್ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದು, ಭದ್ರಾವತಿಗೆ ಕಾಲಿಡು ನೀನು, ನಾನಾ ನೀನಾ ನೋಡೋಣ, ಅದೇನಾಗತ್ತೋ ಆಗ್ಲಿ ನೋಡೋಣ ಬಾ ಎಂದಿದ್ದಾರೆ. ಸದ್ಯ ಈ ದೂರವಾಣಿ ಸಂಭಾಷಣೆ ಎಲ್ಲೆಡೆ ವೈರಲ್ ಆಗಿದೆ.

ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರು ಗಣಿಗಾರಿಕೆಗೆ ವಿರೋಧ ವ್ಯಕ್ತ ಪಡಿಸಿದ್ದು, ಇದಕ್ಕೆ ಆಕ್ರೋಶಗೊಂಡ ಸುಬ್ರಮಣ್ಯ ಸ್ಟೋನ್ ಕ್ರಷರ್ ಮಾಲೀಕ ಅರುಣ್, ಗ್ರಾಮ ಪಂಚಾಯತ್ ಅಧ್ಯಕ್ಷನಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇನ್ನು ಈ ಬಗ್ಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES