ವಿಜಯ್ ಹಜಾರೆಯಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ಕರಣ್ವೀರ್

X
TV5 Kannada7 Oct 2018 3:42 AM GMT
ನೈದಾದ್:ಉತ್ತರಾಖಂಡ್ನ ಯುವ ಬ್ಯಾಟ್ಸ್ಮನ್ ಕರಣ್ವೀರ್ ಕೌಶಲ್ ವಿಜಯ್ ಹಜಾರೆ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಿಕ್ಕಿಂ ವಿರುದ್ಧ ಗ್ರೂಪ್ ವಿಭಾಗದ ಪಂದ್ಯದಲ್ಲಿ ಕರಣ್ವೀರ್ ಅಬ್ಬರದ ಬ್ಯಾಟಿಂಗ್ ಮಾಡಿ ಕೇವಲ 135 ಎಸೆತದಲ್ಲಿ 18 ಬೌಂಡರಿ 9 ಸಿಕ್ಸರ್ಗಳನ್ನ ಸಿಡಿಸಿ ಒಟ್ಟು 202 ರನ್ ಗಳಿಸಿ 149.62 ಸ್ಟ್ರೈಕ್ ರೇಟ್ ಹೊಂದಿದ್ದರು.
ಇವರೊಂದಿಗೆ ತಂಡದ ಮತ್ತೋರ್ವ ಬ್ಯಾಟ್ಸ್ಮನ್ ವಿನೀತ್ ಸಕ್ಸೆನಾ ಶತಕ ಬಾರಿಸಿ ತಂಡದ ಸ್ಕೋರ್ ಹೆಚ್ಚಿಸಿದ್ರು. 50 ಓವರ್ಗಳಲ್ಲಿ ಉತ್ತರಾಖಂಡ ಎರಡು ವಿಕೆಟ್ ನಷ್ಟಕ್ಕೆ 366 ರನ್ ಗಳಿಸಿತು.
ಈ ಹಿಂದೆ 2007ರ ವಿಜಯ್ ಹಜಾರೆ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಮುಂಬೈ ಪರ 187 ರನ್ ಬಾರಿಸಿದ್ದು ಟೂರ್ನಿಯ ಹೈಯೆಸ್ಟ್ ಸ್ಕೋರ್ ಆಗಿತ್ತು.
Next Story