ಏಕಕಾಲದಲ್ಲಿ 2 ಅಭ್ಯಾಸ ಪಂದ್ಯ: ಐತಿಹಾಸಿಕ ದಾಖಲೆ ಬರೆಯುವತ್ತ ಟೀಂ ಇಂಡಿಯಾ

X
TV5 Kannada7 Oct 2018 8:11 AM GMT
ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಏಕಕಾಲದಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನಾಡುವ ಮೂಲಕ ಹೊಸ ಇತಿಹಾಸ ಬರೆಯುವತ್ತ ಹೆಜ್ಜೆ ಹಾಕಿದೆ.
ಮುಂಬರುವ ನವೆಂಬರ್ನಲ್ಲಿ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನ ಏಕಕಾಲದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಡಲಿದೆ.
ಆಸೀಸ್ ವಿರುದ್ಧ ಮೂರು ಫಾರ್ಮೆಟ್ಗಳಲ್ಲಿ ಆಡುವ ಕೆಲವು ಆಟಗಾರರು ಟಿ20 ಸರಣಿಯನ್ನ ಮಿಸ್ ಮಾಡಿಕೊಳ್ಳಲಿದ್ದಾರೆ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ವೇಗಿ ಭುವನೇಶ್ವರ್ ಕುಮಾರ್ ಇದುವರೆಗೂ ರೆಡ್ ಬಾಲ್ನಲ್ಲಿ ಒಂದು ಪಂದ್ಯವನ್ನು ಆಡಿಲ್ಲ. ಹೀಗಾಗಿ ಅಭ್ಯಾಸ ಪಂದ್ಯಗಳಲ್ಲಿ ಭುವಿ ಆಡುವ ಸಾಧ್ಯತೆ ಇದೆ.
ಅಭ್ಯಾಸ ಪಂದ್ಯ ಎರಡು ವಿಭಿನ್ನ ಸ್ಥಳಗಳಲ್ಲಿ ನಡೆದರೆ ಇಂಡಿಯಾ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ತಂಡಕ್ಕೆ ನೆರವಾಗಲಿದ್ದಾರೆ.
Next Story