Top

ಅತ್ಯಲ್ಪ ಅವಧಿಗೆ ಉಪ ಚುನಾವಣೆ ಸೂಕ್ತವಲ್ಲ: ಶೆಟ್ಟರ್

ಅತ್ಯಲ್ಪ ಅವಧಿಗೆ ಉಪ ಚುನಾವಣೆ ಸೂಕ್ತವಲ್ಲ: ಶೆಟ್ಟರ್
X

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಅತ್ಯಲ್ಪ ಅವಧಿಗೆ ಉಪಚುನಾವಣೆ ನಡೆಸುವುದು ಸರಿಯಲ್ಲ. ಈ ಬಗ್ಗೆ ಚುನಾವಣಾ ಆಯೋಗ ವೈಜ್ಞಾನಿಕವಾಗಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ 6 ತಿಂಗಳು ಮಾತ್ರ ಬಾಕಿ ಇದೆ‌. ಹೀಗಾಗಿ ಉಪ ಚುನಾವಣೆ ನಡೆಸುವ ನಿರ್ಧಾರ ಸೂಕ್ತವಲ್ಲ. ಆದರೂ ಎರಡು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಸಿದ್ದ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ನವರು ಲೋಕಾಯುಕ್ತ ಸಂಸ್ಥೆಯನ್ನು ಹಲ್ಲುಕಿತ್ತ ಹಾವನ್ನಾಗಿಸಿದ್ದಾರೆ. ತಮ್ಮ ಮೇಲೆ ಬರುವ 60ರಿಂದ 70 ಪ್ರಕರಣಗಳನ್ನು ಮುಚ್ಚಿಹಾಕಲು ಹಾಗೂ ಸ್ವಹಿತಾಸಕ್ತಿ ಕಾಪಾಡಿಕೊಳ್ಳಲು ತಮ್ಮ ಅಧಿಕಾರಾವಧಿಯಲ್ಲಿ ಎಸಿಬಿಯನ್ನು ಅಸ್ತಿತ್ವಕ್ಕೆ ತಂದರು ಎಂದು ಶೆಟ್ಟರ್ ಆರೋಪಿಸಿದರು.

ಸಿಎಂ ಕುಮಾರಸ್ವಾಮಿ ಅವರು ತಮ್ಮ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವುದಾಗಿ ಹೇಳಿದ್ದರು. ಆದರೆ ಈವರೆಗೂ ಆ ಕೆಲಸ ಆಗದೇ ಇರೋದು ದುರ್ದೈವದ ಸಂಗತಿ. ಬಹುಶಃ ಅವರಿಗೆ ಲೋಕಾಯುಕ್ತ ಸಂಸ್ಥೆ ಬೇಕಾದಂತೆ ಕಾಣುತ್ತಿಲ್ಲ. ಆದ್ರೆ ಬಿಜೆಪಿ ಮಾತ್ರ ಲೋಕಾಯುಕ್ತಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ‌ ಎಂದು ಶೆಟ್ಟರ್ ಹೇಳಿದರು.

Next Story

RELATED STORIES