Top

ಸರ್ಕಾರದಿಂದ ಡೋಂಗಿ ರಾಜಕಾರಣ: ಮುತಾಲಿಕ್

ಸರ್ಕಾರದಿಂದ ಡೋಂಗಿ ರಾಜಕಾರಣ: ಮುತಾಲಿಕ್
X

ಚಿಕ್ಕಮಗಳೂರಿನ ದತ್ತಪೀಠದ ವಿಚಾರದಲ್ಲಿ ರಾಜ್ಯ ಸರ್ಕಾರ ಡೋಂಗಿ ರಾಜಕಾರಣ ಮಾಡುತ್ತಿದೆ. ಅಕ್ಟೋಬರ್ 25ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠದಲ್ಲಿ ಹಿಂದೂ ಆರ್ಚಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಶಬರಿಮಲೈ ಗೆ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕೊಟ್ಟ ವಿಚಾರ ಸುಪ್ರೀಂ ಕೋರ್ಟ್ ನ ಅದೇಶವನ್ನು ನಾವು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್ ಶಬರಿ‌ಮಲೈ ವಿಚಾರವನ್ನು ಮರು ಪರಿಶೀಲನೆ ನಡೆಸಬೇಕು. ಹಿಂದೂ ಸಾಂಪ್ರದಾಯಕ್ಕೆ ಧಕ್ಕೆ ತರುವಂತಹ ವಿಷಯವಾಗಿದೆ. ಸಂಸತ್ತಿನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಕ್ಕೆ ಧಕ್ಕೆಬಾರದ ರೀತಿ ಕಾನೂನು ಹೊರಡಿಸಬೇಕು ಎಂದರು

ಗೌರಿ ಹತ್ಯೆಯ ತನಿಖೆಯನ್ನು ಎಸ್ ಐಟಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮತ್ತು ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ.ಬಂಧಿತ ಅರೋಪಿಗಳಿಗೆ ಚಿತ್ರಹಿಂಸೆ ನೀಡಿ 25 ಲಕ್ಷಕ್ಕೆ ಆಮಿಷ ಒಡ್ಡುತ್ತಿದ್ದಾರೆ .

ಹಿಂದೂ ವಿರೋಧಿ ಎಸ್ ಐಟಿ ತಂಡಕ್ಕೆ ನಮ್ಮ ವಿರೋಧವಿದೆ ಕೂಡಲೇ ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಮಾಡಿದರು ಶ್ರೀರಾಮ ಸೇನೆ ಕಾರ್ಯಕರ್ತರು ರಾಜಕೀಯದಿಂದ ದೂರವಿದೆವೆ. ನಾವು ಹೋರಾಟ ಮಾಡಿತ್ತೇವೆ ಅದರೆ ಅಡುಗೆ ಮಾಡುವುದು ಊಟ ಮಾಡುವುದು ಮಾತ್ರ ಬೇರೆಯವರು ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ತಿಳಿಸಿದರು.

Next Story

RELATED STORIES