ಭೂಮಿಯಿಂದ ಬೆಂಕಿ ಜ್ವಾಲೆ: ಚಿತ್ರದುರ್ಗದಲ್ಲಿ 'ಲಾವಾ' ಭಯ

X
TV5 Kannada7 Oct 2018 1:50 AM GMT
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಲಾವಾರಸದಂತೆ ಭೂಮಿಯಿಂದ ಬೆಂಕಿಯ ಜ್ವಾಲೆ ಬಂದಿದ್ದು, ಘಟನೆಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಮನಮೈನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾರಾಯಣ ನಾಯ್ಕ್ ಎಂಬುವರ ಜಮೀನಿನಲ್ಲಿ ಲಾವಾರಸವನ್ನೇ ಹೋಲುವಂಥ ಬೆಂಕಿ ಕಂಡುಬಂದ ವೀಡಿಯೋ ವೈರಲ್ ಆಗಿದೆ.
ವಿದ್ಯುತ್ ತಂತಿಯಲ್ಲಿ ಸಮಸ್ಯೆಯಾಗಿ ಲಾವಾರಸದಂತೆ ಬೆಂಕಿ ಉತ್ಪತ್ತಿಯಾಯ್ತಾ ಎಂಬ ಅನುಮಾನ ಮೂಡಿದೆ. ಭೂಮಿಯಿಂದ ಕೊತ ಕೊತ ಕುದಿಯುವ ಮಾದರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇನ್ನು ಬೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬದ ಮೂಲಕ ಆರ್ತಿಂಗ್ ಬಂದು ಕಂಬದಲ್ಲಿದ್ದ ಕಬ್ಬಿಣ ಬೆಂಕಿಯಾಗಿ ಬಂದಿದೆ ಎಂದು ಹೇಳುತ್ತಿದ್ದಾರೆ.
ಒಟ್ಟಾರೆಯಾಗಿ ಈ ವಿಚಿತ್ರ ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದರೂ, ಮನಮೈನಹಟ್ಟಿ ಗ್ರಾಮದ ಜನತೆಯಲ್ಲಿ ಆತಂಕ ಮನೆ ಮಾಡಿದೆ.
Next Story