Top

ಬಿಜೆಪಿಯ ಅಪಪ್ರಚಾರದಿಂದ ಸೋಲು: ಸಿದ್ದರಾಮಯ್ಯ

ಬಿಜೆಪಿಯ ಅಪಪ್ರಚಾರದಿಂದ ಸೋಲು: ಸಿದ್ದರಾಮಯ್ಯ
X

ದೇಶದಲ್ಲೇ ಮಾದರಿ ಎಂಬಂತಹ ಜನರಿಗೆ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದರೂ ಅದನ್ನು ಮರೆತು ಬಿಜೆಪಿಯ ಜಾತಿ ಅಪಪ್ರಚಾರಕ್ಕೆ ಕಿವಿಗೊಟ್ಟು ನಮ್ಮನ್ನು ಸೋಲಿಸಿದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

ಬೆಂಗಳೂರಿನಲ್ಲಿ ಓಕಳಿಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನನ್ನು ಜಾತಿ ವಿರೋಧಿ, ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಲಾಯಿತು ಎಂದರು.

ನಾನು ಎಲ್ಲಾ ಧರ್ಮ, ಜಾತಿ ಜನರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೆ. ಆದರೆ ಜನ ಜಾತಿ, ಧರ್ಮ ನೋಡಿ ಮತ ಹಾಕಿದರು. ಧರ್ಮ, ಜಾತಿ ಅನ್ನೋದು ಒಂದು ಅಫೀಮು. ಎಲ್ಲಾ ಮಹತ್ತರ ಜಯಂತಿಗಳನ್ನು ಆಚರಿಸಲು ಪ್ರಾರಂಭಿಸಿದ್ದು ನಾವೇ ಎಂದರು.

ನಾನು ಕುವೆಂಪುರವರ ನಾಡಗೀತೆಯಲ್ಲಿ ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತಿನ ಮೇಲೆ ನಂಬಿಕೆ ಇಟ್ಟವನು. ಆದರೂ ಸಿದ್ದರಾಮಯ್ಯ ಹಿಂದೂ ವಿರೋದಿ, ಜಾತಿ ವಿರೋಧಿ ಎಂದು ಬಿಂಬಿಸಿದರು ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಸಂತೋಷ್ ಗುರೂಜಿ, ದೇವರ ದಯೆ ಇದ್ದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಟಿಪ್ಪು ಜಯಂತಿ ಆಚರಣೆಗೆ ನಾನೂ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಅವರು ಜಾತಿ ವಿರೋಧಿ ಅಲ್ಲ. ತೆಂಗಿನ ಕಾಯಿ ಇದ್ದಂತೆ. ಹೊರಗೆ ಒರಟು. ಒಳಗೆ ಮೃದು ಎಂದರು.

Next Story

RELATED STORIES