Top

ಚಿತ್ರನಟ ಧ್ರುವ ಸರ್ಜಾಗೆ 30ನೇ ಹುಟ್ಟು ಹಬ್ಬದ ಸಂಭ್ರಮ

ಚಿತ್ರನಟ ಧ್ರುವ ಸರ್ಜಾಗೆ 30ನೇ ಹುಟ್ಟು ಹಬ್ಬದ ಸಂಭ್ರಮ
X

ಬೆಂಗಳೂರು : ಸ್ಯಾಂಡಲ್ ವುಡ್ ಚಿತ್ರನಟ ಧ್ರುವ ಸರ್ಜಾ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನ ನಿನ್ನೆ ತಡರಾತ್ರಿ ಆಚರಿಸಿಕೊಂಡ್ರು.

ಬೆಂಗಳೂರಿನ ಬನಶಂಕರಿಯ ಎರಡನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬವನ್ನ ನೂರಾರು ಸಂಖ್ಯೆಯ ಅಭಿಮಾನಿಗಳ ಜೊತೆ ಆಚರಿಸಿಕೊಂಡ್ರು.

ಈ ವೇಳೆ ನೂಕುನುಗ್ಗಲು ಸಂಭವಿಸಿ ಹತ್ತಾರು ಮಂದಿ ಗಾಯಗೊಂಡ್ರು. ಹುಟ್ಟುಹಬ್ಬದ ಆಚರಣೆಯ ನಿಮಿತ್ತ ಪೊಲೀಸ್ ಭದ್ರತೆ ತೆಗೆದುಕೊಳ್ಳದೆ ಕಾರ್ಯಕ್ರಮ ಆಯೋಜಿಸಿದ್ದರಿಂದ ನೂಗುನುಗ್ಗಲು ಹೆಚ್ಚಾಗಿತ್ತು.

ನೂರಾರು ಸಂಖ್ಯೆಯಲ್ಲಿ ಬಂದ ಅಭಿಮಾನಿಗಳು ಪೊಲೀಸ್ರ ಲಾಠಿ ರುಚಿ ನೋಡ್ತಿದ್ದಂತೆ ಅಭಿಮಾನವೂ ಸಾಕು ಬದುಕಿದೆಯಾ ಬಡಜೀವಾ ಅಂತ ಬಂದದಾರಿಯಲ್ಲೇ ಮನೆಸೇರಿದ್ರು.

ಇದೇ ವೇಳೆ ಮಾತನಾಡಿದ ಧ್ರುವ ಸರ್ಜಾ ದೇವರ ಆಶೀರ್ವಾದದಿಂದ ಎಲ್ಲಾನೂ ಒಳ್ಳೇ ರೀತಿಯಲ್ಲಿ ನಡೀತಿದೆ. ಅಭಿಮಾನಿಗಳ ಪ್ರೀತಿಗೆ ನಾನು ಚಿರರುಣಿ.

ಅದೇ ರೀತಿ ಈ ವರ್ಷ ಪೊಗರು ಸೇರಿದಂತೆ ಮೂರ್ನಾಕ್ಕು ಸಿನಿಮಾದಲ್ಲಿ ನಟಿಸಲಿದ್ದೇನೆ ಎಂದು ಹೇಳಿದ್ರು.

Next Story

RELATED STORIES