ರಾಜ್ಯಕ್ಕೆ ಕಾಲಿಟ್ಟ ಹಂದಿಜ್ವರ: ಎಚ್ಚರಿಕೆ ಕ್ರಮಗಳು ಇಲ್ಲಿವೆ

ರಾಜ್ಯಕ್ಕೆ ಮಹಾಮಾರಿ ಹೆಚ್​ 1 ಎನ್​ 1 ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಹಂದಿಜ್ವರ ಪೀಡಿತರ ಪ್ರಮಾಣ ಹೆಚ್ಚಾಗ್ತಿದ್ದು ಸಾಂಕ್ರಾಮಿಕ ರೋಗದ ಬಗ್ಗೆ ಆರೋಗ್ಯ ಇಲಾಖೆ ಹೈ-ಅಲರ್ಟ್ ಘೋಷಿಸಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಕಳೆದ ಒಂದು ವಾರದಿಂದ ಶಂಕಿತ ಹೆಚ್​ 1 ಎನ್​ 1 ಪ್ರಕರಣಗಳು ಹೆಚ್ಚು ಪತ್ತೆಯಾಗ್ತಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಅಂದ್ರೆ ಡಿಸೆಂಬರ್ ವೇಳೆಗೆ ಹೆಚ್ಚಾಗಿ ಹರಡುವ ಹೆಚ್​1ಎನ್​​1 ಸೋಂಕು ಈ ಬಾರಿ ಅಕ್ಟೋಬರ್ ತಿಂಗಳಲ್ಲೇ ಜನರನ್ನ ಬಾಧಿಸುತ್ತಿದೆ. ರಾಜಧಾನಿಯ ಕೆಲವೆಡೆ ಮಳೆ ಪ್ರಮಾಣ ಹೆಚ್ಚಾಗಿರೋದ್ರಿಂದ ಸಾಂಕ್ರಾಮಿಕ ರೋಗಗಳು ಹರಡತೊಡಗಿವೆ.. ಹೀಗಾಗಿ ಸರ್ಕಾರ ಕೂಡ ಎಚ್ಚೆತ್ತಕೊಂಡಿದ್ದು, ಎಲ್ಲಿ ಎಲ್ಲಿ ಸೋಂಕು ಪ್ರಕರಣಗಳು ದಾಖಲಾಗಿವೆ ಅಂತ ನಗರ ಜಿಲ್ಲಾಡಳಿತ ವರದಿ ಮಾಡಿದೆ.

ಹಂದಿ ಜ್ವರದ ಲಕ್ಷಣಗಳನ್ನ ನೋಡೋದಾದ್ರೆ, ಸತತ ಕೆಮ್ಮು, ಅಂದ್ರೆ ವಾರದಿಂದ ಕಾಡುವುದು.. ಅತೀವ ಜ್ವರ, ಕಫಗಟ್ಟಿರುವ ಗಂಟಲು, ದೇಹದ ಒಂದೊಂದು ಅಂಗವೂ ನೋವಿನಿಂದ ಕಿರುಗುಟ್ಟುವುದು, ಸುಸ್ತು, ತಲೆ ಎತ್ತಲಾರದಷ್ಟು ತಲೆನೋವು ಮತ್ತು ವಾಂತಿ ಮತ್ತು ಬೇಧಿ H1N1 ರೋಗದ ಲಕ್ಷಣಗಳು.

  • ಹಂದಿಜ್ವರ ಹರಡುವುದು ಹೇಗೆ?
  • ಇದು ಸಾಂಕ್ರಾಮಿಕ ಕಾಯಿಲೆ
  • ಹಂದಿಮಾಂಸ ಸ್ವಚ್ಛ ಮಾಡದಿರುವುದು
  • ಮಾಂಸ ಸರಿಯಾಗಿ ಬೇಯಿಸದೆ ತಿನ್ನುವುದು
  • ರೋಗಾಣು ಬೆರೆತ ನೀರು, ಮಾಂಸ ಸೇವನೆ
  • ಹಂದಿಜ್ವರ ಪೀಡಿತ ವ್ಯಕ್ತಿಯ ಜೊಲ್ಲು
  • ಪೀಡಿತನ ಸೀನಿನ ಮೂಲಕವೂ ಸೊಂಕು

ಸಾಂಕ್ರಾಮಿಕ ರೋಗ ಹರಡುವುದನ್ನ ತಡೆಗಟ್ಟುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ಮಾಹಿತಿ ರವಾನಿಸಿದ್ದು, ರೋಗ ಹರಡುವುದನ್ನ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದೆ.

ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.. ಪ್ರತಿ ಆಸ್ಪತ್ರೆಗಳಿಗೂ ನಿತ್ಯದ ರಿಪೋರ್ಟ್ ಕಳುಹಿಸಲು ಇಲಾಖೆ ಸೂಚನೆ ನೀಡಿ ಸುತ್ತೊಲೆ ಹೊರಡಿಸಿದೆ. ಜೊತೆಗೆ ಕೆ.ಆರ್​.ಪುರಂ ಭಾಗದಲ್ಲಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದು  ಬೆಂಗಳೂರಿನಿಂದ ಕೇರಳ ಕಡೆ ಹೋಗುವ ಪ್ರವಾಸಿಗರಿಗೆ ಎಚ್ಚರದಿಂದ ಮಾಸ್ಕ್​ ಧರಿಸುವಂತಯೆ ಸೂಚನೆ ನೀಡಲಾಗಿದೆ.

ವೀಣಾ ಸಿದ್ದಾಪುರ ಟಿವಿ 5 ಬೆಂಗಳೂರು