Top

ಗೌಡಯ್ಯ ಅಕ್ರಮ ಆಸ್ತಿ ವಿವರ ಕೇಳಿದರೆ ಬೆಚ್ಚಿಬೀಳ್ತೀರಿ!

ಗೌಡಯ್ಯ ಅಕ್ರಮ ಆಸ್ತಿ ವಿವರ ಕೇಳಿದರೆ ಬೆಚ್ಚಿಬೀಳ್ತೀರಿ!
X

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿದ ಮುಖ್ಯ ಇಂಜಿನಿಯರ್ ಗೌಡಯ್ಯ ಮನೆಯ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಭ್ರಷ್ಟಾಚಾರ ನಿಗ್ರಹ (ಎಸಿಬಿ) ಅಧಿಕಾರಿಗಳು ಪತ್ತೆ ಮಾಡಿದ ಆಸ್ತಿಯ ವಿವರ ಬಹಿರಂಗಪಡಿಸಿದ್ದು, ಆಸ್ತಿಯ ವಿವರ ಬೆಚ್ಚಿಬೀಳಿಸುವಂತಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಗೌಡಯ್ಯ ಆಸ್ತಿಯ ವಿವರವನ್ನು ಎಸಿಬಿ ಡಿಐಜಿ ಚಂದ್ರಶೇಖರ್ ರಾವ್ ಪ್ರಕಟಿಸಿದರು.

ಗೌಡಯ್ಯ ಮನೆಯಲ್ಲಿ ಪತ್ತೆಯಾದ ಆಸ್ತಿ ವಿವರ ಗೌಡಯ್ಯ ಮತ್ತು ಕುಟುಂಬಸ್ತರ ಹೆಸರಿನಲ್ಲಿ ಎರಡು ಮನೆ, 8 ನಿವೇಶನ, 14 ಅಪಾರ್ಟ್​ಮೆಂಟ್ ಫ್ಲ್ಯಾಟ್​, 18 ಕೆ.ಜಿ.ಚಿನ್ನ,10 ಕೆ.ಜಿ.ಬೆಳ್ಳಿ, 3 ಕಾರು, 3 ದ್ವಿಚಕ್ರ ವಾಹನ ಪತ್ತೆ, 77 ಲಕ್ಷ ನಗದು, ವಿವಿಧ ಬ್ಯಾಂಕ್​ಗಳ ಖಾತೆಗಳಲ್ಲಿ 15 ಲಕ್ಷ ರೂ. ಮತ್ತು 30 ಲಕ್ಷ ಠೇವಣಿ ಹಣ ಪತ್ತೆಯಾಗಿದೆ ಎಂದು ಚಂದ್ರಶೇಖರ್ ರಾವ್ ವಿವರಿಸಿದರು.

ಬಿಡಿಎ ಹೌಸಿಂಗ್ ಪ್ರಾಜೆಕ್ಟ್ ಗಳು ಫ್ಲಾಟ್ ನಿರ್ಮಾಣ ಹೊಣೆ ಗೌಡಯ್ಯ ಹೆಗಲಿಗೆ ಇತ್ತು ಇದರಲ್ಲೆ ಕೋಟಿಗಟ್ಟಲೆ ಕಮಿಷನ್ ಹಣ ಗೌಡಯ್ಯ ಪಡೆಯುತ್ತಿದ್ದರು.ಅಲ್ಲದೇ ಕಂಟ್ರಾಕ್ಟರ್ ಗಳ ಬಿಲ್ನಲ್ಲಿ 5-10 ಪರ್ಸೆಂಟ್ ಕಮಿಷನ್ ವಸೂಲಿ ಮಾಡುತ್ತಿದರು. ಬಿಡಿಎನಲ್ಲಿ ಇದ್ದುಕೊಂಡೇ ರಿಯಲ್ ಎಸ್ಟೇಟ್ ದಂಧೆ ಜತೆಗೆ ಖಾಸಗೀ ಕಂಪನಿಯ ಮಾಲೀಕ ಕೂಡ ಗೌಡಯ್ಯ

ಬಿಡಿಎನಲ್ಲಿರುವ ತನ್ನ ಕೊಠಡಿಯಲ್ಲಿ ಹಲವು ಮಹತ್ವದ ದಾಖಲೆಗಳನ್ನ ಗೌಡಯ್ಯ ಸಂಗ್ರಹಿಸಿಟ್ಟಿದ್ದಾರೆ ಅನ್ನೋ ಮಾಹಿತಿ ಹೀಗಾಗಿ ಎಸಿಬಿ ಅಧಿಕಾರಿಗಳಿಂದ ಗೌಡಯ್ಯ ಕೊಠಡಿ ತಪಾಸಣೆ ಸಾಧ್ಯತೆ ಇದೆ.

ಸದ್ಯಕ್ಕೆ ಬಸವೇಶ್ವರ ನಗರದಲ್ಲಿರೋ ಗೌಡಯ್ಯ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಂದ ತಪಾಸಣೆ ನಡೆದಿದ್ದು. ಎಸಿಬಿ ಅಧಿಕಾರಿಗಳನ್ನ ಕಂಡ ಕೂಡಲೇ ಮನೆಯಲ್ಲಿದ್ದ ಎರಡು ಕೋಟಿ ರೂಪಾಯಿ ಹಣವನ್ನ ಬಿಸಾಕಿದ್ದಾರೆ ಅಂತಾ ಬಿಡಿಎನಲ್ಲಿರೋ ಕೆಲ ಅಧಿಕಾರಿಗಳಿಂದಲ್ಲೇ ಮಾಹಿತಿ ಸಿಕ್ಕಿದೆ.

Next Story

RELATED STORIES