Top

ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್​

ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್​
X

ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಲಾದ ಮಧ್ಯಪ್ರದೇಶ, ರಾಜಸ್ಥಾನ, ಮಿಜೊರಾಂ, ತೆಲಂಗಾಣ ಹಾಗೂ ಚತ್ತೀಸ್​ಗಢ ಒಳಗೊಂಡ ಪಂಚರಾಜ್ಯಗಳ ಚುನಾವಣೆಗೆ ಮುಹೂರ್ತ ಕೊನೆಗೂ ಅಧಿಕೃತವಾಗಿ ಪ್ರಕಟಗೊಂಡಿದೆ.

ಕೇಂದ್ರ ಚುನಾವಣಾಧಿಕಾರಿ ಓ.ಪಿ.ರಾವತ್ ಮಧ್ಯಾಹ್ನ ಬಹುನಿರೀಕ್ಷಿತ ಚುನಾವಣೆ ದಿನಾಂಕ ಪ್ರಕಟಿಸಿದರು. ನವೆಂಬರ್ 28ರಂದು ಮೂರು ರಾಜ್ಯಗಳ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ, ಮಿಜೊರಾಂ ಒಂದೇ ಹಂತದಲ್ಲಿ ಚುನಾವಣೆ ನಡೆದರೆ, 80 ಸ್ಥಾನಗಳ ಚತ್ತೀಸ್​ಗಢದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಡಿಸೆಂಬರ್ 7ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಆದರೆ ಎಲ್ಲಾ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 11ರಂದು ಪ್ರಕಟವಾಗಲಿದೆ.

Next Story

RELATED STORIES