Top

ಬಸ್ ನಿಲ್ದಾಣವೇ ಮಾಯ ಮಾಡಿದ ಬಿಜೆಪಿ ಮುಖಂಡ!

ಬಸ್ ನಿಲ್ದಾಣವೇ ಮಾಯ ಮಾಡಿದ ಬಿಜೆಪಿ ಮುಖಂಡ!
X

ದಿನನಿತ್ಯ ಸಾವಿರಾರು ಜನರು ಓಡಾಡುವ, ಆಶ್ರಯತಾಣವಾಗಿದ್ದ ಬಸ್ ನಿಲ್ದಾಣ ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಂಗಮಾಯ ಆಗಿದೆ. ಭೂಮಿ ಒತ್ತುವರಿ ಮಾಡಿಕೊಂಡು ಮನೆ, ಅಂಗಡಿ ಬೆಳಗಾಗುವುದರೊಳಗೆ ಕಟ್ಟುವುದನ್ನು ನೋಡಿದ್ದೀರಿ. ಆದರೆ ಇಲ್ಲಿ ಬಸ್ ನಿಲ್ದಾಣವೇ ಮಾಯ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ಸಂಜೆ ಇದ್ದ ಬಸ್ ನಿಲ್ದಾಣ ಬೆಳಗ್ಗೆ ಆಗುವಷ್ಟರಲ್ಲಿ ನೆಲಸಮವಾಗಿರುವ ಘಟನೆ ನಡೆದಿದೆ. ರಾತ್ರೋರಾತ್ರಿ ಬಸ್ ನಿಲ್ದಾಣವನ್ನೇ ಕಿಡಿಗೇಡಿಗಳು ನೆಲಸಮ ಮಾಡಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ಬಸ್ ನಿಲ್ದಾಣ ಇಲ್ಲಿ ಇತ್ತು ಎಂಬ ಕುರುಹೇ ಇಲ್ಲದಂತೆ ಮಾಡಿದ್ದಾರೆ ಕಿಡಿಗೇಡಿಗಳು.

ಬಸ್ ನಿಲ್ದಾಣದ ಹಿಂಭಾಗದಲ್ಲಿಯೇ ಈರಣ್ಣ ಕುರಿ ಎನ್ನುವರ ನಿವಾಸವಿದೆ ಇವರು ಬಿಜೆಪಿ ಮುಖಂಡ ಕೂಡ. ಇವರ ಮನೆಗೆ ಅಡ್ಡಿಯಾಗುತ್ತೆ ಎನ್ನುವ ಉದ್ದೇಶದಿಂದ ಈರಣ್ಣ ಕಡೆಯವರೇ ಬಸ್ ನಿಲ್ಧಾಣವನ್ನು ನಾಶಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತಿದೆ.

ಕಟ್ಟಡ ನಾಶಮಾಡಿರುವುದನ್ನು ಕಂಡ ಗ್ರಾಮಪಂಚಾಯತ್ ಸದಸ್ಯರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ,ತನಿಖೆ ಚುರುಕುಗೊಳಿಸಿದ್ದಾರೆ.

Next Story

RELATED STORIES