Top

ಶಿವಮೊಗ್ಗದಿಂದ ಬಿಎಸ್​ವೈ ಪುತ್ರ ರಾಘವೇಂದ್ರ ಕಣಕ್ಕೆ

ಶಿವಮೊಗ್ಗದಿಂದ ಬಿಎಸ್​ವೈ ಪುತ್ರ ರಾಘವೇಂದ್ರ ಕಣಕ್ಕೆ
X

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರಿಂದ ತೆರವಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸಲಿದ್ದಾರೆ.

ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ನವೆಂಬ್ 3ರಂದು ನಡೆಯಲಿದೆ. ಕೇಂದ್ರ ಚುನಾವಣಾಧಿಕಾರಿ ಓ.ಪಿ. ರಾವತ್ ದಿನಾಂಕ ಪ್ರಕಟಿಸಿದ್ದು, 3 ತಿಂಗಳ ಅವಧಿಗಾಗಿ ಹೊಸ ಸಂಸದರನ್ನು ಆಯ್ಕೆ ಮಾಡಬೇಕಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಜಯಭೇರಿ ಬಾರಿಸಿದ್ದ ಬಿಎಸ್​. ಯಡಿಯೂರಪ್ಪ, ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ತೆರವಾದ ಸ್ಥಾನಕ್ಕೆ ಸ್ವತಃ ಪುತ್ರ ರಾಘವೇಂದ್ರ ಕಣಕ್ಕಿಳಿಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಸ್ವತಃ ಈ ಘೋಷಣೆ ಮಾಡಿದ್ದು, ಹಿಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದಂತೆ ರಾಘವೇಂದ್ರ ಅವರನ್ನೂ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ಯಡಿಯೂರಪ್ಪ ಲೋಸಕಭೆಯಿಂದ ವಿಧಾನಸಭೆಗೆ ಮರಳಿದಾಗ ಅವರ ಸ್ವಕ್ಷೇತ್ರವನ್ನು ಪುತ್ರ ರಾಘವೇಂದ್ರ ಬಿಟ್ಟುಕೊಟ್ಟಿದ್ದರು. ಇದೀಗ ತಂದೆಯ ಜಾಗಕ್ಕೆ ಮಗ ಕಣಕ್ಕಿಳಿಯಲಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ್ದ ಶ್ರೀರಾಮುಲು ಸೂಚಿಸಿದ ವ್ಯಕ್ತಿಗೆ ಅವಕಾಶ ನೀಡಲು ಬಿಜೆಪಿ ನಿರ್ಧರಿಸಿದೆ.

Next Story

RELATED STORIES