Top

ಮೂರೇ ದಿನಕ್ಕೇ ಗೆದ್ದ ಭಾರತ: ವಿಂಡೀಸ್​ಗೆ ಇನಿಂಗ್ಸ್ ಆಘಾತ

ಮೂರೇ ದಿನಕ್ಕೇ ಗೆದ್ದ ಭಾರತ: ವಿಂಡೀಸ್​ಗೆ ಇನಿಂಗ್ಸ್ ಆಘಾತ
X

ಫಾಲೋಆನ್​ಗೆ ಗುರಿಯಾಗಿದ್ದ ವೆಸ್ಟ್ ಇಂಡೀಸ್ ತಂಡ ಸ್ಪಿನ್ನರ್ ಕುಲದೀಪ್ ಯಾದವ್ ಮಾರಕ ದಾಳಿಗೆ ತತ್ತರಿಸಿ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 272 ರನ್​ಗಳ ಭಾರೀ ಅಂತರದಿಂದ ಸೋಲುಂಡಿದೆ. ಇದರೊಂದಿಗೆ ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ದಾಖಲಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 6 ವಿಕೆಟ್​ಗೆ 96 ರನ್​ಗಳಿಂದ ಮೊದಲ ಇನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್ 181 ರನ್​ಗಳಿಗೆ ಆಲೌಟಾಯಿತು. ಫಾಲೋಆನ್​ಗೆ ಗುರಿಯಾದ ವಿಂಡೀಸ್ ಮತ್ತೆ ಬ್ಯಾಟಿಂಗ್​ಗೆ ಇಳಿದರೂ ಎರಡನೇ ಇನಿಂಗ್ಸ್ ನಲ್ಲಿ 196 ರನ್​ಗಳಿಗೆ ಪತನಗೊಂಡಿತು.

ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್​ಗೆ 649 ರನ್​ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದ ಭಾರತ ತಂಡ ಇದರೊಂದಿಗೆ ಇನಿಂಗ್ಸ್ ಹಾಗೂ 272 ರನ್​ಗಳಿಗೆ ಸೋಲುಂಡಿತು.

ಮೊದಲ ಇನಿಂಗ್ಸ್ ನಲ್ಲಿ ಪರಿಣಾಮಕಾರಿ ದಾಳಿ ಸಂಘಟಿಸಿದ ಆರ್.ಅಶ್ವಿನ್ 4 ವಿಕೆಟ್ ಪಡೆದರೆ, ಎರಡನೇ ಇನಿಂಗ್ಸ್ ನಲ್ಲಿ ಕುಲದೀಪ್ ಯಾದವ್ 5 ವಿಕೆಟ್ ಗಳಿಸಿದರು.

ವಿಂಡೀಸ್ ಪರ ಕೀರನ್ ಪೋವೆಲ್ ಏಕಾಂಗಿ ಹೋರಾಟ ನಡೆಸಿ 83 ರನ್ ಸಿಡಿಸಿದರೂ ಮತ್ತೊಂದು ತುದಿಯಿಂದ ಯಾವುದೇ ಬೆಂಬಲ ದೊರೆಯಲಿಲ್ಲ. ಇದರಿಂದ ವಿಂಡೀಸ್ ಎರಡೂ ಇನಿಂಗ್ಸ್ ಗಳಲ್ಲಿ 200ರೊಳಗೆ ಆಲೌಟಾದ ಕುಖ್ಯಾತಿಗೆ ಪಾತ್ರವಾಯಿತು.

  • ಸಂಕ್ಷಿಪ್ತ ಸ್ಕೋರ್
  • ಭಾರತ ಮೊದಲ ಇನಿಂಗ್ಸ್ 9 ವಿಕೆಟ್​ 649 ಡಿಕ್ಲೇರ್
  • ವೆಸ್ಟ್ ಇಂಡೀಸ್ 181 (ಚೇಸ್ 53, ಪಾಲ್ ಅಜೇಯ 47,ಅಶ್ವಿನ್ 37/4) ಮತ್ತು 196 (ಚೇಸ್ 83, ಕುಲದೀಪ್ 57/5, ಜಡೇಜಾ 35/3).
  • ಪಂದ್ಯಶ್ರೇಷ್ಠ: ಆರ್​.ಅಶ್ವಿನ್​

Next Story

RELATED STORIES