Top

ಕುಸಿದ ವಿಂಡೀಸ್: ಫಾಲ್​ ಆನ್ ಭೀತಿಯಲ್ಲಿ ಬ್ರಾಥ್​ವೈಟ್ ಪಡೆ

ಕುಸಿದ ವಿಂಡೀಸ್: ಫಾಲ್​ ಆನ್ ಭೀತಿಯಲ್ಲಿ ಬ್ರಾಥ್​ವೈಟ್  ಪಡೆ
X

ರಾಜ್​ಕೋಟ್​: ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 649 ರನ್​ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಬೃಹತ್ ಮೊತ್ತ ಬೆನ್ನತ್ತಿರುವ ವೆಸ್ಟ್​ ಇಂಡೀಸ್ ಆರಂಭಿಕ ಆಘಾತ ಅನುಭವಿಸಿ ದಿನದ ಅಂತ್ಯಕ್ಕೆ 94 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿದೆ.

ಎರಡನೇ ದಿನದಾಟದ ಪಂದ್ಯ ಮುಂದುವರೆಸಿದ ವಿರಾಟ್ ಕೊಹ್ಲಿ ( 139), ರವೀಂದ್ರ ಜಡೇಜಾ ಅಜೇಯ 100, ರಿಷಭ್ ಪಂತ್ (92) ರನ್​ಗಳ ನೆರವಿನಿಂದ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 649 ರನ್​ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ಪರ ಬಿಶೂ 4 ವಿಕೆಟ್ ಪಡೆದು ಮಿಂಚಿದ್ರು.

649ರನ್​ಗಳ ಬೃಹತ್ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್​ಗೆ ವೇಗಿ ಮೊಹ್ಮದ್ ಶಮಿ ಕ್ಯಾಪ್ಟನ್ ಕಾರ್ಲೋಸ್​ ಬ್ರಾಥ್​ವೈಟ್, ಪೊವೆಲ್ ವಿಕೆಟ್​ ಪಡೆದು ಆಘಾತ ಕೊಟ್ರು.

ನಂತರ ಬಂದ ಹೋಪ್ (10), ಹೆಟ್ಮರ್​ ( 10), ಆ್ಯಂಬ್ರಿಸ್ (12), ಡೌರಿಚ್ (10), ಚೇಸ್ ಅಜೇಯ 27, ಪೌಲ್ ಅಜೇಯ 13 ರನ್​ಗಳಿಸಿ ಮೂರನೇ ದಿನಕ್ಕೆ ಕ್ರಿಸ್​ ಕಾಯ್ದುಕೊಂಡ್ರು.

ವೆಸ್ಟ್ ಇಂಡೀಸ್ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತು. ಟೀಂ ಇಂಡಿಯಾ ಪರ ಮೊಹ್ಮದ್ ಶಮಿ 2, ಆರ್​.ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲ್​ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ರು.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್ 649/9 ಡಿಕ್ಲೇರ್

ವಿರಾಟ್ ಕೊಹ್ಲಿ 139, ರವೀಂದ್ರ ಜಡೇಜಾ ಅಜೇಯ 100

ಬಿಶೂ 217ಕ್ಕೆ 4, ಲಿವೀಸ್ 93ಕ್ಕೆ2

ವೆಸ್ಟ್ಇಂಡೀಸ್ ಮೊದಲ ಇನ್ನಿಂಗ್ಸ್ 94/6

ಚೇಸ್ ಅಜೇಯ 27, ಪೌಲ್ ಅಜೇಯ13

ಮೊಹ್ಮದ್ ಶಮಿ 11ಕ್ಕೆ 2, ರವೀಂದ್ರ ಜಡೇಜಾ 9ಕ್ಕೆ 1

Next Story

RELATED STORIES