ನೊಬೆಲ್‌ ಶಾಂತಿ ಪ್ರಶಸ್ತಿ ಪ್ರಕಟ : ಡೇನಿಸ್‌ ಮುಕ್ವೆಜ್‌, ನಾಡಿಯಾ ಮುರಾದ್‌ಗೆ ಪುರಸ್ಕಾರ

ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿರುವ ಕಾಂಗೊದ ಸ್ತ್ರೀರೋಗ ತಜ್ಞ ಡೇನಿಸ್‌ ಮುಕ್ವೆಜ್ ಮತ್ತು ಮಾನವ ಹಕ್ಕು ಹೋರಾಟಗಾರ್ತಿ, ಇರಾಕ್‌ನ ನಾಡಿಯಾ ಮುರಾದ್‌ ಅವರಿಗೆ 2018ರ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ ದೊರೆತಿದೆ.

ಇರಾಕ್‌ನಲ್ಲಿ 2014ರಲ್ಲಿ ಐಸಿಸ್‌ ಸಂಘಟನೆಯ ಉಗ್ರರಿಗೆ ಸೆರೆ ಸಿಕ್ಕಿದ್ದ ಯಾಜಿದಿ ಮಹಿಳೆ ನಾಡಿಯಾ ಮುರಾದ್‌, ಉಗ್ರರಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು.

ಕೆಲ ದಿನಗಳ ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದ ಅವರು ಮಾನವ ಹಕ್ಕುಗಳ ಹೋರಾಟ ಆರಂಭಿಸಿದ್ದಾರೆ.

ವಿಶ್ವದ ಲೈಂಗಿಕ ದೌರ್ಜನ್ಯದ ದೇಶವೆಂದೇ ಹೆಸರಾಗಿದ್ದ ಇರಾಕ್‌ನಲ್ಲಿ ದಿಟ್ಟೆಯಾಗಿ ಹೋರಾಡಿದ್ದ ನಾಡಿಯಾ ಮುರಾದ್ ಅವರಿಗೆ 2018ರ ನೋಬೆಲ್ ಶಾಂತಿ ಪುರಸ್ಕಾರ ದೊರೆತಿದ್ದು, ಅವರ ಸೇವೆಗೆ ಸಂದ ಗೌರವವಾಗಿದೆ.

ಇನ್ನು, ವಿಶ್ವದ ಹೆಸರಾಂತ ಸ್ತ್ರೀರೋಗ ತಜ್ಞ ಎನಿಸಿರುವ ಡೇನಿಸ್‌ ಮುಕ್ವೆಜ್, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಚಿಕಿತ್ಸೆ ಹಾಗೂ ನೆರವು ನೀಡುತ್ತಿದ್ದಾರೆ. ಮಹಿಳೆಯರ ರಕ್ಷಣೆಗಾಗಿಯೂ ಶ್ರಮಿಸುತ್ತಿದ್ದಾರೆ.

63 ವರ್ಷದ ಡೇನಿಸ್ ಮುಕ್ವೆಜ್‌, ಮಂದಬೆಳಗಿನಲ್ಲೂ ಸ್ತ್ರೀ ರೋಗ ತಜ್ಞೆಯಾಗಿ ಲೆಕ್ಕವಿರದಷ್ಟು ಮಹಿಳೆಯರಿಗೆ ಆಪರೇಷನ್‌ನಂತ ಕಾರ್ಯವನ್ನು ನಡೆಸಿದ್ದಾರೆ.

ಈ ಬಗ್ಗೆ 2012ರಲ್ಲಿ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ್ದ ಡೇನಿಸ್ ಮುಕ್ವೆಜ್‌ ಕೊಂಗೋ ಸೈನಿಕರು ಮಹಿಳೆಯ ಮೇಲೆ ನಡೆಸುತ್ತಿದ್ದ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರದಂತ ಘಟನೆ ಬಗ್ಗೆ ಧ್ವನಿ ಎತ್ತಿದ್ದರು.

ಮೊದ ಮೊದಲು ಮಹಿಳೆಯರಿಗೆ ಚಿಕಿತ್ಸೆ ನೀಡುತ್ತಿದ್ದ ಇವರು, ಆನಂತ್ರದ ದಿನಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಜನಿಸಿದ ಮಕ್ಕಳಿಗೆ ಚಿಕಿತ್ಸೆ ಕೂಡ ನೀಡೋಕೆ ಶುರು ಮಾಡಿದ್ದರು.

ಇಂತಹ ದಿಟ್ಟ ಮಹಿಳೆಗೆ, ವಿಶ್ವದ ಅತ್ಯುನ್ನತ ಗೌರವ 2018ರ ನೋಬೆಲ್ ಶಾಂತಿ ಪ್ರಶಸ್ತಿ ಸಂದಿದ್ದು ನಿಜಕ್ಕೂ ಶ್ಲಾಘನೀಯವೇ ಸರಿ.