Top

ಕೊಡಗು ಸಂತ್ರಸ್ತರ ಹೆಸರಿನಲ್ಲಿ ವೃದ್ಧರಿಗೆ ಮೋಸ..!

ಕೊಡಗು ಸಂತ್ರಸ್ತರ ಹೆಸರಿನಲ್ಲಿ ವೃದ್ಧರಿಗೆ ಮೋಸ..!
X

ಹಾಸನ: ಕೊಡಗು ನೆರೆ ಸಂತ್ರಸ್ತರಿಗೆ 2 ತಿಂಗಳ ಪಿಂಚಣಿ ಹಣ ನೀಡಲಾಗಿದೆ ಎಂದು ನಂಬಿಸಿ, ಓರ್ವ ಪೋಸ್ಟ್‌ಮ್ಯಾನ್ 200ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೋಸ ಮಾಡಿದ್ದಾರೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ದೊಡ್ಡ ಕಣಗಾಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 200ಕ್ಕೂ ಹೆಚ್ಚು ಫಲಾನುಭವಿಗಳ ಲಕ್ಷಾಂತರ ಹಣ ನುಂಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಅಂಚೆಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಗ್ರಾಮಸ್ಥರೆದುರು ಪೋಸ್ಟ್‌ಮ್ಯಾನ್ ತಪ್ಪೊಪ್ಪಿಕೊಂಡಿದ್ದಾನೆ.

ಕಣಗಾಲು ಅಂಚೆ ಕಚೇರಿಯ ಪೋಸ್ಟ್‌ ಮಾಸ್ಟರ್ ಮದನ್ ವಿರುದ್ಧ ಗ್ರಾಮಸ್ಥರು ಹಲವು ಬಾರಿ ದೂರು ನೀಡಿದ್ದರೂ ಉಪಯೋಗವಾಗಿಲ್ಲ.

ಪಿಂಚಣಿ ಹಣವನ್ನ ತಲುಪಿಸಲು ಸಿಬ್ಬಂದಿಗಳು ಲಂಚ ಪಡೆಯುತ್ತಿರುವುದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಈ ಬಗ್ಗೆ ದೂರು ನೀಡಲು ಗ್ರಾಮಸ್ಥರು ಮುಂದಾಗಿದ್ದಾರೆ.

Next Story

RELATED STORIES