Top

ಶೂಟಿಂಗ್ ವೇಳೆ ಬಿದ್ದು ಪೆಟ್ಟು ಮಾಡಿಕೊಂಡ ಸುದೀಪ್..!

ಶೂಟಿಂಗ್ ವೇಳೆ ಬಿದ್ದು ಪೆಟ್ಟು ಮಾಡಿಕೊಂಡ ಸುದೀಪ್..!
X

ಕಿಚ್ಚ ಸುದೀಪ್ , ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯೋ ಬ್ಯುಸಿ. ಆ್ಯಕ್ಟಿಂಗ್, ಡೈರೆಕ್ಷನ್, ಪ್ರೋಡ್ಯೂಸಿಂಗ್, ಕ್ರಿಕೆಟ್ , ಪ್ರೋಗ್ರಾಮ್ ಹೋಸ್ಟಿಂಗ್ ಒಂದಾ ಎರಡಾ, ವರ್ಷ ಪೂರ್ತಿ ಪುರುಸೋತ್ತಿಲ್ದಂಗ್ ಇರೋ ಪುರುಷೋತ್ತಮ ಮಾಣಿಕ್ಯ. ಇಂತಹ ಮಹನೀಯ ಈಗ ಬೆಡ್ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.

ಇದೊಂಥರ ರೀಲ್ ಆಂಡ್ ರಿಯಲ್​ ಎರಡರಲ್ಲೂ ತಾಳೆಯಾಗುತ್ತಿರುವ ಘಟನೆ. ಸಿನಿಮಾದಲ್ಲಿ ಸೈರಾ ನರಸಿಂಹ ರೆಡ್ಡಿ ಅವುಕು ರಾಜ ಬ್ರಿಟೀಷರ ವಿರುದ್ಧ ಹೋರಾಡಲು ಸಾಥ್ ನೀಡುತ್ತಾನೆ.

ರಿಯಲ್ಲಾಗಿ ಹೇಳಬೇಕಂದ್ರೆ ಮೆಗಾಸ್ಟಾರ್ ಚಿರಂಜೀವಿಯವರ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತಷ್ಟು ಸ್ಟಾರ್ ವ್ಯಾಲ್ಯು ಕೊಟ್ಟಿದ್ದಾರೆ ಕಿಚ್ಚ ಸುದೀಪ್.

ಆದ್ರೆ ಈಗ ಸೈರಾದಿಂದಲೇ ಸುದೀಪ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೂಟಿಂಗ್ ವೇಳೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ ಸುದೀಪ್​ಗೆ ಬೆನ್ನು ನೋವಾಗಿದೆ ಎಂದು ಅಧಿಕೃತವಾಗಿ ಗೊತ್ತಾಗಿದ್ದು ದಿ ವಿಲನ್ ಮಾಧ್ಯಮ ಗೋಷ್ಠಿಯಲ್ಲಿ.

ಪ್ರೇಮ್ ಸಾರಥ್ಯದ ದಿ ವಿಲನ್ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಾಗ ಶಿವಣ್ಣ ಈ ಮಾತನ್ನ ಹೇಳಿದ್ದು. ಇಂತಹ ಅದ್ಧೂರಿ ಸಿನಿಮಾಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಶಿವಣ್ಣ ಧನ್ಯವಾದ ಸಮರ್ಪಿಸಿದ್ದರು.

ಜೊತೆಗೆ ಸುದೀಪ್​ಗೆ ಥ್ಯಾಂಕ್ಸ್ ಹೇಳುವಾಗ ಸುದೀಪ್ ಯಾಕೆ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಅನ್ನೋದನ್ನು ಬಿಚ್ಚಿಟ್ಟರು.

ಸುದೀಪ್ ಸೈರಾ ಸಿನಿಮಾದಲ್ಲಿ ಕುದುರೆ ಒಡಿಸುತ್ತಿದ್ದಾಗ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಬಿದ್ದ ನಂತರ ಎಷ್ಟೋ ದೂರ ಸುದೀಪ್ ​ಅವರನ್ನು ಕುದುರೆ ದರದರ ಎಳೆದುಕೊಂಡು ಹೋಗಿದೆ ಅಂತೆ. ಸೈರಾ ಸಿನಿಮಾ ಭಾರಿ ಬಜೆಟ್​ನ ಬಿಗ್ ಪ್ರಾಜೆಕ್ಟ್​​.

ಬರಿ ಕ್ಲೈಮ್ಯಾಕ್ಸ್​ ಎಂಟು ನಿಮಿಷಕ್ಕಾಗಿ 54ಕೋಟಿ ಖರ್ಚು ಮಾಡುತ್ತಿದೆ ಚಿತ್ರತಂಡ. ಎಷ್ಟೇ ಮುತುವರ್ಜಿ ವಹಿಸಿ ಕೆಲಸ ಮಾಡಿದ್ರು ಏನಾದ್ರು ಒಂದು ದುರ್ಘಟನೆ ಆಗಿಬಿಡುತ್ತವೆ.

ಅದೃಷ್ಣವಶಾತ್ ಸುದೀಪ್ ದೊಡ್ಡ ಹೊಡೆತದಿಂದ ಪಾರಾಗಿದ್ದಾರೆ. ಆದಷ್ಟು ಬೇಗ ಸುದೀಪ್ ಮೊದಲಿನಂತೆ ಕೆಲಸದ ಹಿಂದೆ ಕುದುರೆ ಹಂಗೆ ಓಡಲಿ ಎಂದು ಹಾರೈಸುವ.

ಶ್ರೀಧರ್ ಶಿವಮೊಗ್ಗ_ಎಂಟರ್​​ಟೈನ್ಮೆಂಟ್ ಬ್ಯೂರೋ_TV5

Next Story

RELATED STORIES