Top

ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಎಸ್.ಎಂ.ಕೃಷ್ಣ ಪುತ್ರಿ..?

ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಎಸ್.ಎಂ.ಕೃಷ್ಣ ಪುತ್ರಿ..?
X

ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಪುತ್ರಿ ಶಾಂಭವಿ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಕೃಷ್ಣ ಕುಟುಂಬದ ಕೆಲವರು, ಆಪ್ತರಿಂದ ಮಾಹಿತಿ ದೊರೆತಿದ್ದು, ಎಸ್.ಎಂ.ಕೆ ಎರಡನೇ ಪುತ್ರಿ ಶಾಂಭವಿಯನ್ನು ರಾಜಕರಣಕ್ಕೆ ಕರೆತರುವ ಸಂಭವವಿದೆ.

2019ರ ಲೋಕಸಭಾ ಚುನಾವಣೆಗೆ ಶಾಂಭವಿ ಕರೆತರುವಂತೆ ಆಪ್ತವಲಯದವರು ಒತ್ತಾಯಿಸಿದ್ದು, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಆಗಿಸುವಂತೆ ಎಸ್.ಎಂ.ಕೆ ಆಪ್ತರು ಸಲಹೆ ನೀಡಿದ್ದಾರೆ.

ಅಲ್ಲದೇ ಬಿಜೆಪಿಯಿಂದಲೇ ನಿಲ್ಲಿಸಿದರೆ ಮೋದಿ ವರ್ಚಸ್ಸಿನಿಂದ ಗೆಲುವು ಸುಲಭವೆಂದು ಆಪ್ತರು ಅಭಿಪ್ರಾಯಪಟ್ಟಿದ್ದು, ಆಪ್ತರ ಒತ್ತಾಯಕ್ಕೆ ಮಣಿದು ಪುತ್ರಿ ಶಾಂಭವಿಯನ್ನ ಎಸ್‌.ಎಂ.ಕೃಷ್ಣ ರಾಜಕೀಯಕ್ಕೆ ತರ್ತಾರಾ..? ಕೃಷ್ಣ ಕುಟುಂಬದ ಕುಡಿ ಶಾಂಭವಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.

Next Story

RELATED STORIES