Top

ಮೊದಲ ಟೆಸ್ಟ್​: ಬೃಹತ್ ಮೊತ್ತದತ್ತ ಭಾರತ

ಮೊದಲ ಟೆಸ್ಟ್​: ಬೃಹತ್ ಮೊತ್ತದತ್ತ ಭಾರತ
X

ಆರಂಭಿಕ ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಸಿಡಿಸಿದ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತದತ್ತ ಸಾಗಿದೆ.

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ದಿನದಾಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 364 ರನ್ ಗಳಿಸಿದೆ.

ಇನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ಕೆ.ಎಲ್. ರಾಹುಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಚೊಚ್ಚಲ ಪಂದ್ಯವಾಡಿದ ಪೃಥ್ವಿ ಶಾ ಹಾಗೂ ಚೇತೇಶ್ವರ್ ಪೂಜಾರ ಎರಡನೇ ವಿಕೆಟ್​ಗೆ 206 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಸುಸ್ಥಿತಿಗೆ ತಂದರು.

ಪೃಥ್ವಿ ಶಾ 134 ರನ್ ಬಾರಿಸಿ ಔಟಾದರೆ, ಪೂಜಾರ 130 ಎಸೆತಗಳಲ್ಲಿ 14 ಬೌಂಡರಿ ಒಳಗೊಂಡ 86 ರನ್ ಬಾರಿಸಿ ನಿರ್ಗಮಿಸಿದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಾಲ್ಕನೇ ವಿಕೆಟ್​ಗೆ 105 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.

ಕೊಹ್ಲಿ 137 ಎಸೆತಗಳಲ್ಲಿ 4 ಬೌಂಡರಿ ಸೇರಿದ 72 ರನ್ ಬಾರಿಸಿ ಕ್ರೀಸ್​ನಲ್ಲಿದ್ದು ತಂಡವನ್ನು ಎರಡನೇ ದಿನ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ರಹಾನೆ (41) ರನ್ ಬಾರಿಸಿ ಔಟಾಗಿದ್ದು, ವಿಕೆಟ್ ಕೀಪರ್ ರಿಷಭ್ ಪಂತ್ (17) ಕ್ರೀಸ್​ನಲ್ಲಿ ಉಳಿದುಕೊಂಡಿದ್ದಾರೆ.

ವಿಂಡೀಸ್ ಪರ ಯಾವುದೇ ಬೌಲರ್ ಪರಿಣಾಮಕಾರಿ ದಾಳಿ ಸಂಘಟಿಸಲಿಲ್ಲ. ಗ್ಯಾಬ್ರಿಯೆಲ್, ಲೆವಿಸ್​, ದೇವೇಂದ್ರ ಬಿಶೂ ಮತ್ತು ಚೇಸ್ ತಲಾ 1 ವಿಕೆಟ್ ಪಡೆದರು.

  • ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 89 ಓವರ್ 4 ವಿಕೆಟ್​ 364 (ಪೃಥ್ವಿ ಶಾ 134, ಪೂಜಾರ 84, ಕೊಹ್ಲಿ ಅಜೇಯ 72, ರಹಾನೆ 41, ರಿಷಭ್ ಅಜೇಯ 17, ಗ್ಯಾಬ್ರಿಯೆಲ್ 66/1, ಲೆವಿಸ್ 56/1, ಚೇಸ್ 67/1).

Next Story

RELATED STORIES