Top

ಸಾಕ್ಷ್ಯ ಕೊಡದೇ ಆರೋಪ ಮಾಡಿದ ದುನಿಯಾ ವಿಜಿ ಪತ್ನಿ ನಾಗರತ್ನ

ಸಾಕ್ಷ್ಯ ಕೊಡದೇ ಆರೋಪ ಮಾಡಿದ ದುನಿಯಾ ವಿಜಿ ಪತ್ನಿ ನಾಗರತ್ನ
X

ಎರಡನೇ ಹೆಂಡತಿ ಅಂತ ಹೇಳಿಕೊಳ್ತಾಳೆ. ಆದರೆ ನನಗೆ ಡಿವೋರ್ಸ್ ಕೊಡದೇ ಹೇಗೆ ಮದುವೆ ಆಗಲು ಸಾಧ್ಯ? ಎಂದು ಕೀರ್ತಿ ಗೌಡ ವಿರುದ್ಧ ಹರಿಹಾಯ್ದ ದುನಿಯಾ ವಿಜಿ ಪತ್ನಿ ನಾಗರತ್ನ ಸಾಕ್ಷ್ಯ ಬಿಡುಗಡೆ ಮಾಡದೇ ನುಣುಚಿಕೊಂಡರು.

ದುನಿಯಾ ವಿಜಿ ಹಾಗೂ ಕೀರ್ತಿ ಗೌಡ ವಿರುದ್ಧದ ಸಿಡಿ ಹಾಗೂ ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ನಾಗರತ್ನ ಕೀರ್ತಿ ಗೌಡ ನನ್ನ ಮುಂದೆ ನಿಂತು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವವರೆಗೂ ಸಾಕ್ಷ್ಯ ಬಿಡುಗಡೆ ಮಾಡುವುದಿಲ್ಲ ಎಂದರು.

ಇದೇ ವೇಳೆ ನನಗೆ ಗಂಡ ಬೇಕು. ಆಸ್ತಿ ಬೇಡ. ಆಸ್ತಿಗಾಗಿ ಕೀರ್ತಿ ಗೌಡ ಬಂದಿದ್ದಾರೆ. ದುನಿಯಾ ವಿಜಿ ಹೆಸರಿನಲ್ಲಿ ಮೂರು ಸ್ವಂತ ಮನೆ ಇದ್ದರೂ ಬಾಡಿಗೆ ಮನೆಯಲ್ಲಿ ಯಾಕೆ ಇದ್ದಾರೆ? ಆಸ್ತಿ ಎಲ್ಲಾ ಎಲ್ಲಿ ಹೋಯಿತು ಎಂದು ನಾಗರತ್ನ ಪ್ರಶ್ನಿಸಿದರು.

Next Story

RELATED STORIES