Top

ವಿಧಾನಸೌಧ ಬಿಗ್ ಬಜಾರ್ ತರಹ ಆಗಿಬಿಟ್ಟಿದೆ: ಸಾಹಿತಿ ಕುಂ.ವೀರಭದ್ರಪ್ಪ

ವಿಧಾನಸೌಧ ಬಿಗ್ ಬಜಾರ್ ತರಹ ಆಗಿಬಿಟ್ಟಿದೆ: ಸಾಹಿತಿ ಕುಂ.ವೀರಭದ್ರಪ್ಪ
X

ವಿಧಾನಸೌಧದಲ್ಲಿ ಮೊದಲಿನಷ್ಟು ಪಾವಿತ್ರ್ಯತೆ ಇಲ್ಲ. ಅದೊಂದು‌ ಬಿಗ್ ಬಜಾರ್ ರೀತಿ ಆಗಿಬಿಟ್ಟಿದೆ. ಯಾರೂ ಬೇಕಾದರೂ ಹಣ ಕೊಟ್ಟು ಅಧಿಕಾರ ಪಡೆಯಹುದಾಗಿದೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ.

ಧಾರವಾಡದಲ್ಲಿ ನಡೆದ ಪ್ರತ್ಯೇಕ ರಾಜ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಎಲ್ಲಾ ಕಾಲದಲ್ಲಿಯೂ ಮುಠ್ಠಾಳರು ಇದ್ದರು. ಆದರೆ ಇವತ್ತು ಮುಠ್ಠಾಳರು ಹೆಚ್ಚಾಗಿದ್ದಾರೆ ಎಂದರು.

ಬೆಂಗಳೂರಿನ ಸದಾಶಿವ ನಗರ, ಡಾಲರ್ಸ್ ಕಾಲನಿಗಳಲ್ಲಿ ಕೇವಲ ಉತ್ತರ ಕರ್ನಾಟಕ ಭಾಗದ ಮುಠ್ಠಾಳ ಶಾಸಕರೇ ತುಂಬಿದ್ದಾರೆ. ಉತ್ತರ ಕರ್ನಾಟಕಕ್ಕೆ ಬಂದ ಅನುದಾನವನ್ನು ಹಂಚಿಕೊಂಡು ಅಲ್ಲಿ ಹೋಗಿ ಮನೆ ಮಾಡ್ತಾ ಇದ್ದಾರೆ ಎಂದು ವೀರಭದ್ರಪ್ಪ ಆರೋಪಿಸಿದರು.

ಒಬ್ಬೊಬ್ಬ ಶಾಸಕರ ಬಳಿ ಕನಿಷ್ಠ ಹತ್ತತ್ತು ಸೈಟ್‌ಗಳಿವೆ. ಹೀಗೆ ಬಿಟ್ಟರೆ ಬೆಂಗಳೂರಲ್ಲೆಲ್ಲ ಉತ್ತರ ಕರ್ನಾಟಕದ ರಾಜಕಾರಣಿಗಳೇ ತುಂಬಿ ಹೋಗುತ್ತಾರೆ. ಉತ್ತರ ಕರ್ನಾಟಕದ ಹಿನ್ನೆಡೆಗೆ ಜನಪ್ರತಿನಿಧಿಗಳೇ ಕಾರಣ. ತಪ್ಪು ಮಾಡಿದಾಗ ಜನಪ್ರತಿನಿಧಿಗಳ ಕೊರಳ ಪಟ್ಟಿ ಹಿಡಿದು ಕೇಳಬೇಕು ಎಂದು ವೀರಭದ್ರಪ್ಪ ಕರೆ ನೀಡಿದರು.

ಮುಠಾಳರ ಜೊತೆ ಯುವಕರ ಶಕ್ತಿಯೂ ಹೆಚ್ಚಿದೆ. ಯುವಕರು ರಾಜಕಾರಣಕ್ಕೆ ಧುಮುಕಿ ಶಾಸಕರಾಗಬೇಕು. ಕುಮಾರಸ್ವಾಮಿ ಮಕ್ಕಳು, ಮೊಮ್ಮಕ್ಕಳು ಅವರೇ ಎಂ‌ಎಎಲ್ ಆಗಬೇಕಾ? ಬಂಗಾರಪ್ಪ, ಅವರ ಮಕ್ಕಳೇ ಎಂಎಲ್‌ಎಗಳಾಗಬೇಕಾ? ರಾಜಕಾರಣ, ವಿಧಾನಸಭೆ ಅಂದರೆ ಅವರಪ್ಪನ ಮನೆ ಆಸ್ತಿಯಾ? ಎಂದು ಕುಂ. ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆಗೆ ನಿಲ್ಲುವುದಕ್ಕೆ ನನಗೂ ಆಸೆ ಇದೆ. ಬರೀ ರಾಜಕಾರಣಿಗಳು ಮತ್ತು ಅವರ ಮಕ್ಕಳೇ ತುಂಬಿಕೊಂಡು ಬಿಟ್ಟರೆ ನಮ್ಮಂಥವರು ಎಲ್ಲಿ ಹೋಗಬೇಕು? ಇದನ್ನು ಪ್ರಶ್ನಿಸುವುದನ್ನು ನಮ್ಮ ಯುವಕರು ಕಲಿಯಬೇಕು ಎಂದು ಅವರು ಹೇಳಿದರು.

Next Story

RELATED STORIES