Top

ಶಿರಾಡಿ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

ಶಿರಾಡಿ ರಸ್ತೆ ವಾಹನ ಸಂಚಾರಕ್ಕೆ ಮುಕ್ತ
X

ಚಿಕ್ಕಮಗಳೂರು: ಕಳೆದ ಮೂರು ತಿಂಗಳ ಹಿಂದೆ ಭಾರೀ ಮಳೆಯಿಂದ ಭೂ ಕುಸಿತ ಉಂಟಾಗಿ ಹತ್ತು ಕಡೆ ಭೂ ಕುಸಿತ ಆಗಿತ್ತು, ಅಧಿಕಾರಿಗಳು ಪರೀಶಿಲನೆ ಮಾಡಿ ಬೆಂಗಳೂರು ಮಂಗಳೂರು ಮಾರ್ಗದ ಶಿರಾಡಿ ರಸ್ತೆ ಬಂದ್ ಮಾಡಿದ್ರು.

ಆದರೆ ಈಗ ಅದೇ ಜನರ ಒತ್ತಾಯದ ಜೊತೆಗೆ tv5 ಸ್ಥಳದಿಂದ ವಿಸೃತ ವರದಿ ಪ್ರಸಾರ ಮಾಡಿತ್ತು ಅದರ ಪರಿಣಾಮ ಇಂದಿನಿಂದ ಲಘು ವಾಹನ ಸೇರುದಂತೆ ಬಸ್ಗಳನ್ನು ಸಂಚರಿಸಲು ಅವಾಕಾಶ ಮಾಡಿಕೊಟ್ಟಿದೆ.

ರಾಷ್ಟ್ರೀಯ ಹೆದ್ದಾರಿ 75 ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶಿರಾಡಿ ರಸ್ತೆ ಸುಮಾರು ಹತ್ತು ಕಡೆ ಭೂಕುಸಿತ ಉಂಟಾಗಿ ಸರ್ಕಾರಕ್ಕೆ ಕೊಟ್ಯಾಂತರ ಹಣ ನಷ್ಟವಾಗಿತ್ತು.

ಹಾಗಾಗಿ ಅಲ್ಲಿನ ರಸ್ತೆ ಬಂದ್ ಮಾಡಿ ಚಾರ್ಮಾಡಿ ಮಾರ್ಗವಾಗಿ ಸಂಚರಿಸಲು ಅದೇಶ ಮಾಡಿದ್ರು. ಇದರಿಂದ ಜನರು ಸುಲಭದ ದಾರಿ ಬಿಟ್ಟು ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಹೋಗಬೇಕಿತ್ತು.

ಸ್ಥಳಕ್ಕೆ ಹೋಗಿ ಲಘು ವಾಹನ ಬಿಡಬಹುದು ಎಂದು ಸ್ಥಳೀಯರ ಅಭಿಪ್ರಾಯ ಪಡೆದು tv5 ರಿಯಾಲಿಟಿ ಚೆಕ್ ಮಾಡಿತ್ತು, ಇದು ಸರ್ಕಾರ ಮತ್ತು ಜಿಲ್ಲಾಡಳಿತ ಗಮನಕ್ಕೂ ತರುವುದರಲ್ಲಿ ಯಶಸ್ವಿಯಾಗಿತ್ತು.

ಸುದ್ದಿ ಬಿತ್ತರ ಮಾಡಿದ ಒಂದೇ ದಿನದಲ್ಲಿ ನಾಲ್ಕು ಚಕ್ರದ ವಾಹನಗಳನ್ನು ಶಿರಾಡಿ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿತ್ತು ಹಾಸನ ಜಿಲ್ಲಾಡಳಿತ.

ಆದರೆ ಮಂಗಳೂರಿಗೆ ಹೋಗುತ್ತಿದ್ದ ತರಕಾರಿ, ಹಣ್ಣು, ಹಂಪಲ, ಅಲ್ಲಿಂದ ಬರಬೇಕಿದ್ದ ಇತರೇ ಪದಾರ್ಥಗಳು ಎಲ್ಲವೂ ಈ ಮಾರ್ಗದಲ್ಲಿ ಸ್ಥಗಿತ ಆಗಿದ್ದವು.

ನಂತರ ಅಧಿಕಾರಿಗಳು ಶಿರಾಡಿ ರಸ್ತೆಯ ಇಕ್ಕೆಲಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಜನರಿಗೆ ಅವಲೋಕನ ಮಾಡುವುದರ ಜೊತೆಗೆ ಇಂದಿನಿಂದ ಬಸ್, ಕಾರು, ಸೇರಿದಂತೆ ಲಘು ವಾಹನಗಳನ್ನು ಓಡಾಡಲು ಅವಾಕಾಶ ಮಾಡಿಕೊಟ್ಟಿದೆ.

ನಿನ್ನೆ ಕೂಡ ಲೋಕೋಪಯೋಗಿ ಸಚಿವ ಹೆಚ್ಡಿ ರೇವಣ್ಣ ಅಧಿಕೃತ ಹೇಳಿಕೆ ಕೊಟ್ಟು ಸಂಚಾರ ಆರಂಭಿಸಲು ಹೇಳಿದ್ದಾರೆ.

ಒಂದು ವರ್ಷದಿಂದ ಬಂದ್ ಆದ ಶಿರಾಡಿ ಒಪನ್ ಮಾಡಿದಾಗ ಬೆಂಗಳೂರು ಮಂಗಳೂರು ಪ್ರಯಾಣಿಕರು ಖುಶಿ ಪಟ್ಟಿದ್ದರು.

ಆದರೆ ಮಳೆರಾಯ ಇವರ ಆಸೆಗೆ ತಣ್ಣಿರು ಎರಚಿದ್ದಕ್ಕೆ ಮತ್ತೆ ಮೂರು ತಿಂಗಳು ಕಷ್ಟ ಅನುಭವಿಸಿದ್ರು .ಅದರೇ ಇಂದು ಕೇವಲ ಬಸ್ ಹಾಗೂ ಕಾರು ಸೇರಿದಂತೆ ಲಘು ವಾಹನಗಳಿಗೆ ಅವಾಕಾಶ ಮಾಡಿಕೊಟ್ಟಿದೆ, ಆದರೆ ಭಾರಿ ವಾಹನಗಳಿಗೆ ಇನ್ನೂ ಎರಡು ವಾರ ನೀಷೇಧವಂತೆ.

ಪ್ರಕಾಶ್ tv5 ಹಾಸನ

Next Story

RELATED STORIES