Top

'ಹಾಸನದಂತಹ ಪುಣ್ಯ ಭೂಮಿಯಲ್ಲಿ ಸ್ಪರ್ಧಿಸಲು ನಾನು ಸಿದ್ಧ'

ಹಾಸನದಂತಹ ಪುಣ್ಯ ಭೂಮಿಯಲ್ಲಿ ಸ್ಪರ್ಧಿಸಲು ನಾನು ಸಿದ್ಧ
X

ಹಾಸನ: ಹಾಸನದಲ್ಲಿ ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶ ಪ್ರಜ್ವಲ್ ರೇವಣ್ಣ ತಾವು ಲೋಕಸಭಾ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದೇವೇಗೌಡರು ಈ ರಾಜ್ಯದ ರಾಜಕೀಯ ಶಕ್ತಿ, ಅವರೇ ಮತ್ತೊಮ್ಮೆ ಸ್ಪರ್ಧಿಸಲಿ ಅನ್ನೊದು ನನ್ನ ಆಸೆ. ಒಂದು ವೇಳೆ ಅವರು ಸ್ಪರ್ಧೆ ಮಾಡಲು ಅವಕಾಶ ನೀಡಿದ್ರೆ ಹಾಸನದಂತಹ ಪುಣ್ಯ ಭೂಮಿಯಲ್ಲಿ ಸ್ಪರ್ಧಿಸಲು ನಾನು ಸಿದ್ಧ.

ದೇವೇಗೌಡರ ಏನು ಸಲಹೆ ನೀಡುತ್ತಾರೊ ಅದನ್ನು ನಾನು ಪಾಲಿಸುತ್ತೇನೆ. ಒಂದು ವೇಳೆ ಅವಕಾಶ ನೀಡಲಿಲ್ಲ ಅಂದರೂ ಬೇಸರ ಇಲ್ಲ . ನನಗೆ ಈಗಾಗಲೇ ರಾಜ್ಯ ಪ್ರಧಾನ ಕಾರ್ಯದರ್ಶಿಯಂತಹ ಉತ್ತಮ ಸ್ಥಾನವನ್ನು ನೀಡಿದ್ದಾರೆ. ಪಕ್ಷವನ್ನ ಬಲಪಡಿಸುವ ವಿಚಾರದಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ. ಹಿರಿಯರ ಸಲಹೆಯಂತೆ ನಡೆದುಕೊಳ್ಳುತ್ತೇನೆಂದು ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನನ ನಗರದ ಮಹಾಗಣಪತಿ ದೇವರ ಪೂಜೆಯ ನಂತರ ಮಾಧ್ಯಮಕ್ಕೆ ಪ್ರಜ್ವಲ್ ಈ ಹೇಳಿಕೆ ನೀಡಿದ್ದಾರೆ.

Next Story

RELATED STORIES