Top

ಮಧ್ಯಪ್ರದೇಶ, ರಾಜಸ್ಥಾನ್​ನಲ್ಲಿ ಮೈತ್ರಿ ಇಲ್ಲ: ಮಾಯಾವತಿ

ಮಧ್ಯಪ್ರದೇಶ, ರಾಜಸ್ಥಾನ್​ನಲ್ಲಿ ಮೈತ್ರಿ ಇಲ್ಲ: ಮಾಯಾವತಿ
X

ವರ್ಷಾಂತ್ಯದಲ್ಲಿ ನಡೆಯುವ ಮಧ್ಯಪ್ರದೇಶ ಹಾಗೂ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಲೋಕಸಭಾ ಚುನಾವಣೆಯ ಮೈತ್ರಿ ಅವಕಾಶ ಮುಕ್ತವಾಗಿರಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, ಗುಜರಾತ್​ನಂತಹ ರಾಜ್ಯಗಳಲ್ಲಿ ಸುದೀರ್ಘ ಕಾಲದಿಂದ ಆಡಳಿತ ಕೈತಪ್ಪಿದ್ದರೂ ಕಾಂಗ್ರೆಸ್ ಆಹಂಕಾರ ಕಡಿಮೆಯಾಗಿಲ್ಲ. ಆದ್ದರಿಂದ ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಸ್ಥಾನ ಹಂಚಿಕೆ ಇಲ್ಲ ಎಂದು ಹೇಳಿದರು.

ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಎಷ್ಟು ಆಸಕ್ತಿ ಇದೆ ಎಂಬುದೇ ತಿಳಿದಿಲ್ಲ. ಮೈತ್ರಿಗೆ ಕಾಂಗ್ರೆಸ್ ಇನ್ನೂ ಸಿದ್ಧಗೊಂಡಿಲ್ಲ. ಇದರಿಂದಾಗಿಯೇ ಕರ್ನಾಟಕ ಮತ್ತು ಚತ್ತೀಸ್​ಗಢದಲ್ಲಿ ಹಿನ್ನಡೆ ಉಂಟಾಗಿದ್ದನ್ನು ಕಾಂಗ್ರೆಸ್ ಮರೆಯಬಾರದು ಎಂದು ಮಾಯಾವತಿ ಹೇಳಿದರು.

ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮಾಯಾವತಿ 50 ಸ್ಥಾನಗಳಿಗೆ ಬೇಡಿಕೆ ಸಲ್ಲಿಸಿದ್ದರು. ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ 22 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಮಾಯಾವತಿ ಅವರ ಈ ನಡೆ ಕಾಂಗ್ರೆಸ್​ ಗೆ ಇರಿಸುಮುರುಸು ಉಂಟುಮಾಡಿದ್ದು, ಮಾಯಾವತಿ ನಿರ್ದಿಷ್ಟ ಆರೋಪ ಮಾಡಿಲ್ಲ. ಅವರ ಅಸಮಾಧಾನಕ್ಕೆ ಕಾರಣ ತಿಳಿದು ನಂತರ ಪ್ರತಿಕ್ರಿಯೆ ನೀಡುವುದಾಗಿ ಕಾಂಗ್ರೆಸ್ ಹೇಳಿದೆ.

Next Story

RELATED STORIES