Top

ಭಾರತ- ವಿಂಡೀಸ್ ಮೊದಲ ಟೆಸ್ಟ್: ಹೊಸಬರ ಮೇಲೆ ಕಣ್ಣು

ಭಾರತ- ವಿಂಡೀಸ್ ಮೊದಲ ಟೆಸ್ಟ್: ಹೊಸಬರ ಮೇಲೆ ಕಣ್ಣು
X

ಹೊಸನರು ಹಾಗೂ ಹಳಬರಿಂದ ಕೂಡಿದ ಹೊಸ ಚಿಗುರು ಹಳೆ ಬೇರಿನಂತಾಗಿರುವ ಭಾರತ ತಂಡ ಗುರುವಾರದಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಎದುರಿಸಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ.

ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಟ್ ಫೇವರಿಟ್ ಆಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಆಟಗಾರರೇ ಇರುವುದರಿಂದ ಹಿರಿಯ ಆಟಗಾರರ ಮೇಲೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯ ಹೊರೆ ಬಿದ್ದಿದೆ.

ಏಷ್ಯಾಕಪ್ ನಲ್ಲಿ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ರೋಹಿತ್ ಶರ್ಮ, ಶಿಖರ್ ಧವನ್ ಹಾಗೂ ಕಣಕ್ಕಿಳಿಸದ ಕರುಣ್ ನಾಯರ್ ಅವರನ್ನು ಕೈ ಬಿಟ್ಟಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಭಾರತ ತಂಡ ಈ ಸರಣಿ ಗೆಲ್ಲುವುದಕ್ಕಿಂತ ನವೆಂಬರ್ ನಲ್ಲಿ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಪ್ರವಾಸದ ಮೇಲೆ ಉತ್ತಮ ಆಟಗಾರರನ್ನು ಆಯ್ಕೆ ಮಾಡುವ ಉದ್ದೇಶವನ್ನು ಹೊಂದಿದೆ. ಇಂಗ್ಲೆಂಡ್ ನಲ್ಲಿ ಮಾಡಿದ ತಪ್ಪುಗಳನ್ನು ಇಲ್ಲಿ ಸರಿಪಡಿಸಿಕೊಂಡು ಸಜ್ಜಾಗುವ ಇರಾದೆ ಕೊಹ್ಲಿ ಪಡೆಗಿದೆ.

ಕರ್ನಾಟಕದ ಯುವ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ ವಾಲ್, ರಿಷಭ್ ಪಂತ್, ಹನುಮ ವಿಹಾರಿ, ಮೊಹಮದ್ ಸಿರಾಜ್, ಖಲೀಲ್.. ಹೀಗೆ ಯುವ ಆಟಗಾರರಿಗೆ ತವರಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇದೊಂದು ಅಪೂರ್ವ ಅವಕಾಶವಾಗಿದೆ.

ಮತ್ತೊಂದೆಡೆ ಕೊಹ್ಲಿ ತವರಿನಲ್ಲಿ ಸ್ಪಿನ್ನರ್ ಗಳು ಸಹಜವಾಗಿ ಮೇಲುಗೈ ಸಾಧಿಸುವುದರಿಂದ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ ಗಳನ್ನು ಕಣಕ್ಕಿಳಿಯಲಿದ್ದು, ಆರ್. ಅಶ್ವಿನ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿಯಲಿದ್ದಾರೆ.

ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ ರವೀಂದ್ರ ಜಡೇಜಾ ಅವರಂತಹ ಹಿರಿಯ ಆಟಗಾರರು ಮೂಂಚುಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಲಿದ್ದಾರೆ. ಪೂಜಾರಗೆ ಇದು ತವರಿನ ಪಂದ್ಯವಾಗಿರುವುದರಿಂದ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಮತ್ತೊಂದೆಡೆ ವೆಸ್ಟ್ ಇಂಡೀಸ್ ಕೂಡ ಹಿಂದಿನ ಶಕ್ತಿ ಉಳಿಸಿಕೊಳ್ಳದೇ ಇದ್ದರೂ ಯುವ ಆಟಗಾರರು ದಿಟ್ಟ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಜೇಸನ್ ಹೋಲ್ಡರ್ ಸಾರಥ್ಯದ ವಿಂಡೀಸ್ ತಂಡದಲ್ಲಿ ಕೇಮರ್ ರೋಚ್ ಅನುಭವಿ ಬೌಲರ್ ಇದ್ದಾರೆ. ಕೀರನ್ ಪೊಲಾರ್ಡ್, ಬ್ರಾಥ್ ವೇಟ್, ಸುನೀಲ್ ಆ್ಯಂಬ್ರಿಸ್ ಉತ್ತಮ ಬ್ಯಾಟ್ಸ್ ಮನ್ ಗಳಿದ್ದಾರೆ. ಸ್ಪಿನ್ನರ್ ಆಗಿ ದೇವೇಂದ್ರ ಬಿಶೂ ಪರಿಣಾಮಕಾರಿ ದಾಳಿ ಸಂಘಟಿಸಬಲ್ಲರು.

  • ಸಂಭಾವ್ಯ ತಂಡಗಳು
  • ಭಾರತ:
  • ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್, ಮಾಯಾಂಕ್ ಅಗರ್ ವಾಲ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಅಶ್ವಿನ್, ಜಡೇಜಾ, ಕುಲದೀಪ್ ಯಾದವ್, ಹನುಮ ವಿಹಾರಿ, ಮೊಹಮದ್ ಶಮಿ, ಉಮೇಶ್ ಯಾದವ್, ಮೊಹಮದ್ ಸಿರಾಜ್.
  • ವೆಸ್ಟ್ ಇಂಡೀಸ್:
  • ಜೇಸನ್ ಹೋಲ್ಡರ್ (ನಾಯಕ), ಬ್ರಾಥ್ ವೇಟ್, ಸುನಿಲ್ ಆ್ಯಂಬ್ರಿಸ್, ಕೀರನ್ ಪೊವೆಲ್, ಶಾಯಿ ಹೋಪ್, ರೋಸ್ಟನ್ ಚೇಸ್, ಶೇನ್ ಡೌರಿಚ್, ದೇವೇಂದ್ರ ಬಿಶೂ, ಕೇಮರ್ ರೋಚ್, ಲೂಯಿಸ್, ಗ್ಯಾಬ್ರಿಯೆಲ್,
  • ಪಂದ್ಯ ಆರಂಭ: ಬೆಳಗ್ಗೆ 9.30
  • ಸ್ಥಳ: ಸೌರಾಷ್ಟ್ರ ಕ್ರಿಕೆಟ್ ಮೈದಾನ

Next Story

RELATED STORIES