ನಾನು ಮುಖ್ಯಮಂತ್ರಿ ಆದರೆ... ಸಚಿವ ಎನ್.ಮಹೇಶ್

X
TV5 Kannada3 Oct 2018 3:28 PM GMT
ನಾನೊಬ್ಬ ಗೆದ್ದ ಮಾತ್ರಕ್ಕೆ ರಾಜ್ಯದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಆದರೆ ಏನಾದರೂ ಬದಲಾವಣೆ ಮಾಡಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹೇಳಿಕೆ ನೀಡುವ ಮೂಲಕ ಮುಂದೊಂದು ದಿನ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದರು.
ಜಾತಿ ಎಂಬುದು ನಮ್ಮ ದೇಶಕ್ಕೆ ಅಂಟಿರುವ ದೊಡ್ಡ ರೋಗ. ನಮ್ಮ ದೇಶದಲ್ಲಿ 6 ಸಾವಿರ ಜಾತಿಗಳಿವೆ. 6 ಸಾವಿರ ಜಾತಿಗಳಾಗಿ ನಮ್ಮ ಮೆದುಳು ಒಡೆದುಹೋಗಿದೆ. ಅದಕ್ಕಾಗಿಯೇ ನಮ್ಮಲ್ಲಿ ಐಕ್ಯತೆ ಬಂದಿಲ್ಲ. ಬರೋದೂ ಇಲ್ಲ. ಬೋಲೋ ಭಾರತ್ ಮಾತಾಕೀ ಜೈ ಅಂದ್ರೆ ಐಕ್ಯತೆ ಬರಲ್ಲ. ಈ ಜಾತಿಗಳನ್ನು ಬೆಸೆಯುವಂತ ಕೆಲಸ ಮಾಡಬೇಕು ಎಂದು ಮಹೇಶ್ ಹೇಳಿದರು.
ದೇಶವನ್ನು ಈಗಿನ ಸಂಕಷ್ಟದಿಂದ ಬಿಡುಗಡೆ ಮಾಡುವಂತಹ ಧ್ಯೇಯ ಕಾಂಗ್ರೆಸ್ ಪಕ್ಷಕ್ಕೂ ಇಲ್ಲ ಬಿಜೆಪಿಗೂ ಇಲ್ಲ. ಐಕ್ಯತೆ ತರುವುದಕ್ಕಾಗಿಯೇ ಬಹುಜನ ಸಮಾಜ ಪಕ್ಷ ಹುಟ್ಟಿಕೊಂಡಿದ್ದು ಎಂದು ಮಹೇಶ್ ನುಡಿದರು.
Next Story