Top

'ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ'

ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ
X

ಮೈಸೂರು: ದೇವರ ಬಗ್ಗೆ, ಹಿಂದೂ ಧರ್ಮದ ಬಗ್ಗೆ ಪದೇ ಪದೇ ವಿವಾದಾತ್ಮಕ ಹೇಳಿಕೆ ಕೊಟ್ಟು ಸುದ್ದಿಯಾಗ್ತಿದ್ದ ಪ್ರೊಫೆಸರ್ ಭಗವಾನ್ ಮತ್ತೆ ಸೌಂಡ್ ಮಾಡಿದ್ದಾರೆ.

ದಸರಾ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮಹೀಷನ ಪ್ರತಿಮೆ ಕೆಡವಲು ಭಗವಾನ್ ಕರೆ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಗವಾನ್, ಚಾಮುಂಡಿ ಬೆಟ್ಟದ ಮೇಲಿರುವ ರಾಕ್ಷಸ ರೂಪದ ಮಹಿಷಾಸುರ ವಿಗ್ರಹ ಕೂಡಲೇ ತೆಗೆದುಹಾಕಲು ಆಗ್ರಹಿಸುತ್ತೇನೆಂದು ಹೇಳಿದ್ದಾರೆ.

ಮಹಿಷಾಸುರ ರಾಕ್ಷಸನಲ್ಲ, ಸರ್ವವಜನಾಂಗದ ಏಳಿಗೆಗಾಗಿ ಇದ್ದವನು. ಆತ ರಾಕ್ಷನಾಗಿದ್ದರೆ ಅವನ ಹೆಸರನ್ನೇಕೆ ಮೈಸೂರಿಗೆ ಇಟ್ಟರು‌.. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು.

ನಮ್ಮ ಜನ ಓದಬೇಕು, ಇತಿಹಾಸವನ್ನು ತಿಳಿದುಕೊಳ್ಳಬೇಕು. ಹೊಸ ಹೊಸ ಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ಅಲ್ಲದೇ, ಪುರೋಹಿತಶಾಹಿಗಳ ಮಾತು ಕೇಳಿ ಈ ವಿಗ್ರಹ ರೂಪಿತವಾಯಿತು. 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು.

ಈ ಕೂಡಲೇ ಆ ವಿಗ್ರಹವನ್ನು ತೆಗೆದುಹಾಕಲು ಒತ್ತಾಯ ಮಾಡುತ್ತೇನೆ. ಬೌದ್ದ ಭಿಕ್ಕು ಮಹಿಷಾಸುರನ ವಿಗ್ರಹ ಸ್ಥಾಪನೆಗೆ ಆಗ್ರಹಿಸುತ್ತೇನೆ ಎಂದು ಪ್ರೊ.ಕೆ.ಎಸ್ ಭಗವಾನ್ ಹೇಳಿದ್ದಾರೆ.

Next Story

RELATED STORIES