Top

ಸಹೋದ್ಯೋಗಿಯನ್ನು ಸಸ್ಪೆಂಡ್ ಮಾಡಲು ಹೋಗಿ..!?

ಸಹೋದ್ಯೋಗಿಯನ್ನು ಸಸ್ಪೆಂಡ್ ಮಾಡಲು ಹೋಗಿ..!?
X

ಹಾಸನ: ಇಲ್ಲಿನ ಅರಕಲಗೂಡು ತಾಲೂಕು ದೊಡ್ಡಗಾವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕನನ್ನು ಸಸ್ಪೆಂಡ್ ಮಾಡಲು, ಸಹಶಿಕ್ಷಕ ಮಾಸ್ಟರ್ ಪ್ಲಾನ್ ಮಾಡಿದ್ದು, ಸಿಕ್ಕಿಬಿದ್ದು, ತಾನೇ ಸಸ್ಪೆಂಡ್ ಆಗಿದ್ದಾನೆ.

ಶಾಲಾ ವಿದ್ಯಾರ್ಥಿನಿಯಿಂದ ಈ ಪ್ರಕರಣ ಬಹಿರಂಗವಾಗಿದ್ದು, ಗ್ರಾಮಸ್ಥರು ಶಹಶಿಕ್ಷಕ ನಂಜಪ್ಪನಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಮುಖ್ಯಶಿಕ್ಷಕ ನಾಗರಾಜು

ಮುಖ್ಯಶಿಕ್ಷಕ ನಾಗರಾಜುರನ್ನು ಸಸ್ಪೆಂಡ್ ಮಾಡಿಸುವ ಉದ್ದೇಶದಿಂದ, ನಾಗರಾಜುಗೆ ಕುಡಿಯುವ ಚಟವಿಲ್ಲದಿದ್ದರೂ, ಎಸ್ ಡಿ ಎಸಿ ಅಧ್ಯಕ್ಷರ ಮಗಳ ಕೈಗೆ ಮಧ್ಯದ ಬಾಟಲಿ ಕೊಟ್ಟು ನಾಗರಾಜು ಬ್ಯಾಗ್‌ನಲ್ಲಿ ಮದ್ಯದ ಬಾಟಲಿಯನ್ನಿರಿಸಿದ್ದಾರೆ.

ಈ ವಿಷಯ ಟಿವಿ5ನಲ್ಲಿ ಬಿತ್ತರವಾಗುತ್ತಿದ್ದಂತೆ ಅರಕಲಗೂಡು ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶ್‌ ಆದೇಶ ಹೊರಡಿಸಿದ್ದು, ಸಹಶಿಕ್ಷಕ ನಂಜಪ್ಪನನ್ನು ಅಮಾನತು ಮಾಡಲಾಗಿದೆ. ಮುಖ್ಯಶಿಕ್ಷಕ ನಾಗರಾಜು ಮೇಲೆ ತನಿಖೆಗೆ ಆದೇಶಿಸಲಾಗಿದೆ.

Next Story

RELATED STORIES