Top

ಕಾಂಗ್ರೆಸ್ ಮುಖಂಡನಿಗೆ ಅಣ್ಣಾಮಲೈ ಫುಲ್ ಕ್ಲಾಸ್..!

ಚಿಕ್ಕಮಗಳೂರು: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಭಾರೀ ಮಾತಿನ ಚಕಮಕಿ ನಡೆದಿದ್ದು, ಟಾಕ್ ವಾರ್ ವೀಡಿಯೋ ಫುಲ್ ವೈರಲ್ ಆಗಿದೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು, ಮಾಜಿ ಶಾಸಕ ಜೀವ್‌ರಾಜ್‌ ಜೊತೆ ಸೇರ್ಕೊಂಡು ಕಾಂಗ್ರೆಸ್ ಮುಗ್ಸೋ ಪ್ಲಾನ್ ಮಾಡಿದ್ದೀರಾ ಎಂದು ಎಸ್ಪಿ ಅಣ್ಣಾಮಲೈಗೆ ಆವಾಜ್ ಹಾಕಿದ್ದಾರೆ.

ಇದರಿಂದ ರೊಚ್ಚಿಗೆದ್ದ ಅಣ್ಣಾಮಲೈ ನೀವು ಒಳ್ಳೆ ಅಣ್ಣಾಮಲೈ ನೋಡಿದ್ದೀರಾ, ನನ್ನ ಇನ್ನೊಂದು ಮುಖ ನೋಡ್ಬೇಕಾಗತ್ತೆ. ಮರ್ಯಾದೆಯಿಂದ ಮಾತಾಡ್ತಾ ಇದ್ದೀನಿ , ಹೊಡೆದು ಒಳಗಾಗ್ತೀನಿ ಎಂದು ಎಸ್ಪಿ ಅಣ್ಣಾಮಲೈ ಕಾಂಗ್ರೆಸ್ ಮುಖಂಡನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೊದಲು ಚುನಾವಣೆಯಲ್ಲಿ ನಿಂತು 50 ವೋಟ್ ತೊಗೊಂಡು ಗೆಲ್ಲಿ, ಗೆಟ್ಔಟ್ ಎಂದು ಕಾಂಗ್ರೆಸ್ ಮುಖಂಡನನ್ನು ಅಣ್ಣಾಮಲೈ ಹೊರಗೆ ಕಳುಹಿಸಿದ್ದಾರೆ.

Next Story

RELATED STORIES