Top

ಪೊಲೀಸ್ ಆಯುಕ್ತರ ಕಚೇರಿ ಎದುರು ಪೊಲೀಸ್ ಪ್ರತಿಭಟನೆ!

ಪೊಲೀಸ್ ಆಯುಕ್ತರ ಕಚೇರಿ ಎದುರು ಪೊಲೀಸ್ ಪ್ರತಿಭಟನೆ!
X

ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ ಮೇಲಾಧಿಕಾರಿಯ ವಿರುದ್ಧವೇ ಪೊಲೀಸ್ ಅಧಿಕಾರಿ ಪೊಲೀಸ್ ಕಮಿಷನರ್ ಕಚೇರಿ ಮುಂದೆ ಕೈಯಲ್ಲಿ ಪೆಟ್ರೋಲ್ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ಕೋಲಾರ ಪೊಲೀಸ್ ಕಮಿಷನರ್ ಕಚೇರಿ ಎದುರು ನಡೆದಿದೆ.

ಗಾಂಧೀ ಜಯಂತಿ ದಿನವಾದ ಮಂಗಳವಾರ ನ್ಯಾಯಕ್ಕಾಗಿ ಚಿಕ್ಕಬಳ್ಳಾಪುರದ ಡಿಎಆರ್ ವಿಭಾಗದ ಎಎಸೈ ವೆಂಕಟರೆಡ್ಡಿ ನ್ಯಾಯ ದೊರಕಿಸಿಕೊಡದಿದ್ದರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶ್ರೀನಿವಾಸಪುರ ತಾಲೂಕಿನ ಜಮೀನು ವಿವಾದದಲ್ಲಿ ಸಹಾಯಕ ಕಮೀಷನರ್ ಸುಭಾ ಕಲ್ಯಾಣ್ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಎಎಸ್ಐ ವೆಂಕಟರೆಡ್ಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶ್ರೀನಿವಾಸಪುರ ತಾಲೂಕಿನ ಆರಿಕುಂಟೆ ಗ್ರಾಮದ ರಂಘನಾಥ ರೆಡ್ಡಿ ಎನ್ನುವರಿಂದ ಜಮೀನು ಅಕ್ರಮವಾಗಿ ಕ್ರಯ ಮಾಡಿದ್ದು, ಪೊಲೀಸ್ ಇಲಾಖೆ‌ ಕುಮ್ಮಕ್ಕಿನಿಂದ ಜಮೀನು ಸ್ವಾಧೀನ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶ್ರೀನಿವಾಸಪುರದ ಸರ್ವೇ 22/09 ಬಿ 4 ಎಕರೆಯ ಕೃಷಿ ಭೂಮಿ ತಮಗೆ ನೀಡುವಂತೆ ಆಗ್ರಹಿಸಿ ವೆಂಕಟ ರೆಡ್ಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

Next Story

RELATED STORIES