Top

ಪ್ರೀತಮ್ ಗೌಡನನ್ನು ಕಿಚಾಯಿಸಿದ ಸಚಿವ ರೇವಣ್ಣ

ಪ್ರೀತಮ್ ಗೌಡನನ್ನು ಕಿಚಾಯಿಸಿದ ಸಚಿವ ರೇವಣ್ಣ
X

ಹಾಸನ: ಹಾಸನದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಪ್ರೀತಂಗೌಡ ಬಾರದ ಹಿನ್ನೆಲೆ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ವತಃ ಪ್ರೀತಂಗೌಡ ವಿರುದ್ಧ ಸ್ಥಳದಲ್ಲೇ ಗರಂ ಆಗಿದ್ದಾರೆ.

ಹಾಸನದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಏನ್ರೀ ಪ್ರೀತಂಗೌಡ ನಮ್ಮ ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ ನೀವು. ಕಾರ್ಡ್ ಕೊಟ್ಟು ಫೋನ್ ಮಾಡಿದ್ರೂ ಬರಲೇ ಇಲ್ಲ ಎಂದು ಕಿಚಾಯಿಸಿದ್ದಾರೆ.

ಅದಕ್ಕೆ ಸ್ಥಳದಲ್ಲೇ ಪ್ರತಿಕ್ರಿಯಿಸಿದ ಪ್ರೀತಂಗೌಡ ಇಲ್ಲ ಸಾರ್ ನೀವು ನಮಗೆ ಆಹ್ವಾನ ನೀಡಿಲ್ಲ ಎಂದು ಹೇಳಿದ್ದಾರೆ. ಆಗ ರೇವಣ್ಣ ಮೇಡಮ್ ನೀವೇ ಹೇಳಿ ಎಂದು ಜಿಲ್ಲಾಧಿಕಾರಿ ಬಳಿ ಮಾತನಾಡಿದಾಗ, ಇಲ್ಲ ಸರ್ ಸಿಎಂ ಕಾರ್ಯಕ್ರಮದ ದಿನ ನನಗೆ ಗುದ್ದಲಿ ಪೂಜೆ ಇತ್ತು ಎಂದು ಸಮಜಾಯಿಶಿ ನೀಡಿದ್ದಾರೆ.

Next Story

RELATED STORIES