Top

ದಸರಾ ತಯಾರಿ ಜೊತೆ ಗಾಂಧಿಜಯಂತಿ ಸಂಭ್ರಮ

ದಸರಾ ತಯಾರಿ ಜೊತೆ ಗಾಂಧಿಜಯಂತಿ ಸಂಭ್ರಮ
X

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿಂದು ದಸರಾ ಜೊತೆ ಗಾಂಧಿಜಯಂತಿ ಸಂಭ್ರಮ ಮನೆ ಮಾಡಿತ್ತು, ಗಾಂಧಿ ಕನಸನ್ನ ದಸರೆಯಲ್ಲಿ ನನಸು ಮಾಡಲು ಹೊರಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಗಜಪಡೆಗೆ ಭಾರ ಹೊರಿಸದೆ ಅಹಿಂಸೆ ಸಂದೇಶ ಸಾರಿದ್ರು.

ಇತ್ತ ರಾಜಕೀಯ ಮುಖಂಡರು ಮಾವುತ ಹಾಗೂ ಹೆಚ್‌ಐವಿ ಪೀಡಿತ ಮಕ್ಕಳೊಂದಿಗೆ ಆನೆಗಳ ಕುಟೀರ ಸ್ವಚ್ಚಗೊಳಿಸಿ ಸ್ವಚ್ಚಭಾರತದ ಸಂಕೇತ ತೋರಿದರು. ಅತ್ತ ಮಾವುತ, ಕಾವಾಡಿಗಳಿಗೆ ಭರ್ಜರಿ ಕಟಿಂಗ್‌, ಶೇವಿಂಗ್‌ ನಡೆದಿದ್ದು ಎಲ್ಲರೂ ಮಸ್ತ್‌ ಮಸ್ತ್‌ ಆಗಿ ಮಿಂಚುತ್ತಿದ್ರು.

ಮೈಸೂರಿನಲ್ಲಿ ಕಳೆಗಟ್ಟುತ್ತಿರುವ ದಸರಾ ಸಂಭ್ರಮಕ್ಕೆ ಈ ಬಾರಿ ಗಾಂಧಿಜಯಂತಿಯೂ ಮೆರಗು ತಂದಿದೆ. ಇಂದು ಮಹಾತ್ಮ ಗಾಂಧಿಜೀಯವರ 150ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ದಸರಾ ಗಜಪಡೆಗೆ ಗಾಂಧಿ ತತ್ವದಂತೆ ಅಹಿಂಸೆ ಹಾದಿಯಲ್ಲಿ ತಾಲೀಮು ಮಾಡಿಸಿದ್ರು.

ಅದರಲ್ಲೂ ಇಂದು ಆನೆಗಳಿಗೆ ಯಾವುದೇ ರೀತಿಯ ಭಾರ ಹಾಕದೇ ತಾಲೀಮು ಮಾಡಿಸಿದ ಅಧಿಕಾರಿಗಳು, ಆನೆಗಳಿಗೆ ಮೈಮೇಲೆ ಒಂದು ಹಗ್ಗವನ್ನು ಹಾಕಲು ಬಿಡಲಿಲ್ಲ.

ಇನ್ನು ಈ ಗಾಂಧಿಜಯಂತಿ ಆಚರಣೆ ಇಲ್ಲಿಗೆ ನಿಲ್ಲದೇ ಅರಮನೆ ಆವರಣ ಸ್ವಚ್ಚತೆಗೆ ವಿಸ್ತರಿಸಿತು. ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್‌ ಹೆಚ್‌ಐವಿ ಪಿಡಿತ ಮಕ್ಕಳು ಹಾಗೂ ಗಜಪಡೆಯ ಮಾವುತ ಮತ್ತು ಕಾವಾಡಿಗಳ ಮಕ್ಕಳ ಜೊತೆ ಸೇರಿ ಆನೆಗಳ ಕುಟೀರ ಶುಚಿಗೊಳಿಸಿದರು. ಆನೆಗಳಿಗೆ ಕಬ್ಬು ಬೆಲ್ಲ ತಿನ್ನಿಸಿ ಆರೈಕೆ ಮಾಡಲಾಯಿತು.

ಇನ್ನೂ ಇದರ ಜೊತೆಗೆ ಆನೆಗಳ ಮಾವುತ ಮತ್ತು ಕಾವಾಡಿಗಳಿಗೆ ಇಂದು ಉಚಿತ ಕೇಶಾಲಂಕಾರ ಕಾರ್ಯಕ್ರಮ ಹಮ್ಮಿಕೊಂಡು. ಮಾವುತ, ಕಾವಾಡಿಗರಿಗೆ ಭರ್ಜರಿ ಕಟಿಂಗ್‌ ಶೇವಿಂಗ್‌ ಮಾಡಿದ್ರು. ಈ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಜಿ.ಟಿ.ದೇವೆಗೌಡ ಆಗಮಿಸಿ ಪ್ರೋತ್ಸಾಹಿಸಿದರು.

ಒಟ್ನಲ್ಲಿ ಇಂದು ದಸರೆ ಅಂಗಳದಲ್ಲಿ ಗಾಂಧಿ ಕನಸುಗಳ ಅನಾವರಣವಾಗಿತ್ತು. ಅರಮನೆ, ಆನೆ, ಮಾವುತ, ಕಾವಾಡಿ ಸೇರಿದಂತೆ ಮಕ್ಕಳೆಲ್ಲರೂ ದಸರಾ ಜೊತೆ ಗಾಂಧಿಜಯಂತಿಯ ಭಾಗವಾಗಿದ್ದು ವಿಶೇಷವಾಗಿತ್ತು.

ಸುರೇಶ್ Tv5 ಮೈಸೂರು

Next Story

RELATED STORIES