Top

ಕೋಲ್ಕತಾದಲ್ಲಿ ಬಾಂಬ್ ಸ್ಫೋಟ: 8 ವರ್ಷದ ಬಾಲಕಿ ಸಾವು

ಕೋಲ್ಕತಾದಲ್ಲಿ ಬಾಂಬ್ ಸ್ಫೋಟ: 8 ವರ್ಷದ ಬಾಲಕಿ ಸಾವು
X

ಬಹುಮಹಡಿ ಕಟ್ಟಡದ ಎದುರು ಸಂಭವಿಸಿದ ಸ್ಫೋಟದಲ್ಲಿ 8 ವರ್ಷದ ಮಗು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಕೋಲ್ಕತಾದ ನಗರ್‌ಬಜಾರ್‌ ಪ್ರದೇಶದಲ್ಲಿ ಜರುಗಿದೆ.

ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕಟ್ಟಡದ ತಳ ಮಹಡಿಯಲ್ಲಿದ್ದ ಹಣ್ಣಿನ ಅಂಗಡಿಯ ಸಮೀಪ ಇರಿಸಿದ್ದ ಬಾಂಬ್‌ ಸ್ಫೋಟಗೊಂಡಿದ್ದು, ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ ಸ್ಫೋಟದ ಸದ್ದು ಕೇಳಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ ಆಗಿರಬಹುದೆಂದು ಅಂದುಕೊಂಡಿದ್ದೆವು. ಆದರೆ ಸ್ಫೋಟಕ್ಕೆ ಕಾರಣ ತಿಳಿಯಲು ಪರಿಶೀಲನೆ ನಡೆಯುತ್ತಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇದೇ ಕಟ್ಟಡದಲ್ಲಿ ದಕ್ಷಿಣ ಡಂ ಡಂ ನಗರಸಭೆಯ ಅಧ್ಯಕ್ಷ ಪಂಚುರಾಯ್‌ ಕಚೇರಿಯನ್ನು ಹೊಂದಿದ್ದು, ಅವರನ್ನೇ ಗುರಿಯಾಗಿಸಿಕೊಂಡು ಬಾಂಬ್‌ ಸ್ಫೋಟಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಯ್‌, ರಾಜ್ಯಾದ್ಯಂತ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್‌ನನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿ ಇದಾಗಿದೆ ಎಂದು ಯಾವುದೇ ಪಕ್ಷವನ್ನು ಹೆಸರಿಸದೆ ಆರೋಪಿಸಿದರು. ಇದೊಂದು ನಿಯೋಜಿಕ ಕೃತ್ಯವಾಗಿದ್ದು, ನನ್ನ ಮತ್ತು ಟಿಎಂಸಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Next Story

RELATED STORIES