Top

ಮಗಳನ್ನು ಶಾಲೆಗೆ ಬಿಡಲು ಹೋದ ಕೇಂದ್ರ ಸಚಿವ: ಯಾಕೆ ಗೊತ್ತಾ?

ಮಗಳನ್ನು ಶಾಲೆಗೆ ಬಿಡಲು ಹೋದ ಕೇಂದ್ರ ಸಚಿವ: ಯಾಕೆ ಗೊತ್ತಾ?
X

ಮಕ್ಕಳು ಶಾಲೆಗೆ ಹೋಗುತ್ತಾರೆ ಅಂದರೆ ಅದು ಅಮ್ಮನ ಜವಾಬ್ದಾರಿ. ಅಪ್ಪ ಆ ಕಡೆ ತಲೆ ಹಾಕುವುದೇ ಇಲ್ಲ. ಮಕ್ಕಳು ತೀಟೆ ಮಾಡಿದರೆ, ಅವರ ಮೇಲೆ ಏನಾದರೂ ದೂರು ಇದ್ದರೆ, ಅಪ್ಪ ಬರಲೇಬೇಕು ಎಂದು ಕಟ್ಟಪ್ಪಣೆ ಶಾಲೆಯಿಂದ ಬಂದರೆ ಅಪ್ಪಂದಿರು ಹೋಗುತ್ತಾರೆ. ಅದರಲ್ಲೂ ರಾಜಕಾರಣಿಗಳು, ಕೇಂದ್ರ ಸಚಿವ ಆದರಂತೂ ಮುಗಿದೇ ಹೋಯಿತು. ಫೋನ್ ಕಾಲ್​ನಲ್ಲಿಯೇ ಎಲ್ಲಾ ಮುಗಿದು ಹೋಗುತ್ತದೆ.

ಆದರೆ ಅರುಣಾಚಲ ಮೂಲದ ಕೇಂದ್ರ ಸಚಿವ ಕಿರಣ್ ರಿಜಿಜು ಮೊದಲ ಬಾರಿ ಮಗಳನ್ನು ಶಾಲೆಗೆ ಬಿಡಲು ಹೋಗಿದ್ದಾರೆ. ಅಷ್ಟೂ ಸಾಲದು ಎಂಬಂತೆ ಮಗಳ ಜೊತೆ ಶಾಲೆಯ ಆವರಣದೊಳಗೆ ಸಾಮಾನ್ಯ ಕಟ್ಟೆ ಮೇಲೆ ಕುಳಿತು ಮಾತನಾಡಿದ್ದಾರೆ.

ಇದರಿಂದ ಮಗಳು ಖುಷಿಯಾಗಿದ್ದು ಮಾತ್ರವಲ್ಲ, ಇಡೀ ಶಾಲೆಯಲ್ಲಿ ಅಪ್ಪನ ಬಗ್ಗೆಯೇ ಚರ್ಚೆ ಆಗಿದ್ದು ನೋಡಿ ಥ್ರಿಲ್ ಆಗಿದ್ದಾಳೆ. ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಅತ್ಯಂತ ಬಿಡುವಿಲ್ಲದ ವೇಳಾಪಟ್ಟಿ ನಡುವೆಯೂ ಕೇಂದ್ರ ಸಚಿವ ಕಿರಣ್ ರಿಜಿಜು, ಪೋಷಕರ ದಿನಾಚರಣೆ ವೇಳೆ ಮಗಳ ಜೊತೆ ಹೋಗಿದ್ದಾರೆ. ಇದಕ್ಕೆ ಕಾರಣ ಅಪ್ಪನನ್ನು ಮಗಳು ಓಲೈಸಿದ್ದೇ ಕಾರಣ. ಮಗಳು ಅಪ್ಪನನ್ನು ಓಲೈಸಿದ ವೀಡಿಯೋ ಮಾಡಿದ ತಂದೆ ಕಿರಣ್ ರಿಜಿಜು ಅದನ್ನು ಟ್ವೀಟ್ ಮಾಡಿದ್ದಾರೆ.

Next Story

RELATED STORIES