Top

ಲಕ್ಷ್ಮೀಗೆ ಡಾ.ರಾಜ್​ ಕುಮಾರ್, ನಾರಾಯಣ್​ಗೆ ಪುಟ್ಟಣ್ಣ ಪ್ರಶಸ್ತಿ

ಲಕ್ಷ್ಮೀಗೆ ಡಾ.ರಾಜ್​ ಕುಮಾರ್, ನಾರಾಯಣ್​ಗೆ ಪುಟ್ಟಣ್ಣ ಪ್ರಶಸ್ತಿ
X

ಕನ್ನಡ ಚಿತ್ರರಂಗದಲ್ಲಿ ಜೀವಮಾನದ ಸಾಧನೆಗಾಗಿ ಪಂಚಭಾಷಾ ತಾರೆ ಲಕ್ಷ್ಮೀ ಡಾ.ರಾಜ್ ಕುಮಾರ್ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಎಸ್​. ನಾರಾಯಣ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ನಟ ಜಿ.ಕೆ.ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ ಆಯ್ಕೆ ಸಮಿತಿ ಸರಕಾರಕ್ಕೆ ಈ ಶಿಫಾರಸು ಮಾಡಿದ್ದು, ಸರಕಾರ ಒಪ್ಪಿಗೆ ಸೂಚಿಸಿತು. ಪ್ರಶಸ್ತಿಯು 2 ಲಕ್ಷ ರೂ. ಹಾಗೂ 50 ಗ್ರಾಂ ಚಿನ್ನದ ಪದಕ ಒಳಗೊಂಡಿದೆ.

ಸೋಮವಾರ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಈ ವಿಷಯವನ್ನು ಪ್ರಕಟಿಸಿದ್ದು, ವಿಷ್ಟುವರ್ಧನ್ ಪ್ರಶಸ್ತಿಗೆ ಹಿರಿಯ ನಿರ್ಮಾಪಕ ಜಿ. ಎನ್​. ಲಕ್ಷ್ಮೀಪತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಹಿರಿಯ ನಟ ಜೆ.ಕೆ.ಶ್ರೀನಿವಾಸ ಮೂರ್ತಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಛಾಯಾಗ್ರಾಹಕರಾದ ಬಿ.ಎಸ್.ಬಸವರಾಜು, ನಟಿ ಹೇಮಾ ಚೌಧರಿ, ಸಂಕಲನಕಾರ ಸುರೇಶ್ ಅರಸ್, ಪತ್ರಕರ್ತ ಹುಣಸವಾಡಿ ರಾಜನ್ ಸದಸ್ಯರಾಗಿದ್ದರು.

Next Story

RELATED STORIES