Top

ದುನಿಯಾ ವಿಜಿಗೆ ಕೊನೆಗೂ ಜಾಮೀನು ಮಂಜೂರು

ದುನಿಯಾ ವಿಜಿಗೆ ಕೊನೆಗೂ ಜಾಮೀನು ಮಂಜೂರು
X

ಜಿಮ್ ಟ್ರೈನರ್ ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಕಳೆದ 8 ದಿನಗಳಿಂದ ಜೈಲಿನಲ್ಲಿ ಕಳೆದಿದ್ದ ನಟ ದುನಿಯಾ ವಿಜಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ 70ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ, 1 ಲಕ್ಷ ರೂ. ಭದ್ರತಾ ಠೇವಣಿ ಹಾಗೂ ಸಾಕ್ಷ್ಯ ನಾಶ ಮಾಡದಂತೆ ಎಚ್ಚರಿಕೆಯೊಂದಿಗೆ ಷರತ್ತುಬದ್ಧ ಜಾಮೀನು ನೀಡಿದರು.

ಹಲ್ಲೆ ಪ್ರಕರಣದಲ್ಲಿ ಕಳೆದ 8 ದಿನಗಳಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕಳೆದಿದ್ದ ದುನಿಯಾ ವಿಜಿಗೆ ಕೊನೆಗೂ ಜಾಮೀನು ದೊರೆತಿದ್ದು, ದಾಖಲೆ ಪತ್ರಗಳು ಜೈಲಾಧಿಕಾರಿಗಳಿಗೆ ಲಭಿಸುತ್ತಿದ್ದಂತೆ ಹೊರಬರಲಿದ್ದಾರೆ.

ಇದೇ ವೇಳೆ ಜಾಮೀನು ಮಂಜೂರು ಮಾಡುವ ಮುನ್ನ ದುನಿಯಾ ವಿಜಿಗೆ ನ್ಯಾಯಾಧೀಶ ರಾಮಲಿಂಗೇಗೌಡ, ಹಿತನುಡಿ ನುಡಿದರು. ಸಿನಿಮಾ ನಟ ಆದವರು ರೋಲ್ ಮಾಡಲ್ ಇದ್ದ ಹಾಗೆ. ಈ ರೀತಿ ಹೇಗೆ ಬಂದರೆ ಹಾಗೆ ನಡೆದುಕೊಳ್ಳಬೇಡಿ. ಸ್ವಲ್ಪ ನಿಯಂತ್ರಣದಲ್ಲಿ ಇರುವುದನ್ನು ಕಲಿಯಿರಿ ಎಂದರು.

Next Story

RELATED STORIES