Top

ತಾಳ್ಮೆ ಕಳೆದುಕೊಂಡ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

ತಾಳ್ಮೆ ಕಳೆದುಕೊಂಡ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
X

ಚಿಕ್ಕಮಗಳೂರು: ಪೊಲೀಸರ ಮೇಲೆ ದರ್ಪ ತೋರಿ ಹಸುಗಳ್ಳರು ಪರಾರಿಯಾಗಿರುವ ಸುದ್ದಿಯನ್ನ ಮಾಧ್ಯಮದವರು ಪ್ರಸಾರ ಮಾಡಿದ್ದಕ್ಕೆ ಚಿಕ್ಕಮಗಳೂರು ಎಸ್ಪಿ ಗರಂ ಆಗಿ, ಮಾಧ್ಯಮದವರನ್ನ ನಿಂದಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹಸುಗಳ್ಳರ ಹಾವಳಿ ಮಿತಿಮೀರಿದ್ದು, ಹೈಟೆಕ್ ಸ್ಟೈಲ್‌ನಲ್ಲಿ ಕಳ್ಳತನಕ್ಕೆ ಮೊರೆ ಹೋಗಿದ್ದು, ಮುಖಕ್ಕೆ ಮಾಸ್ಕ್‌ ಹಾಕಿ ಕಾರ್‌ನಲ್ಲಿ ಬಂದು ಹಸುಗಳನ್ನು ಎಸ್ಕೇಪ್‌ ಮಾಡಲಾಗಿತ್ತು. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಎಂಬ ಸುದ್ದಿಯನ್ನ, ಸಿಸಿಟಿವಿ ಫೂಟೇಜ್‌ ಸಮೇತವಾಗಿ ಮಾಧ್ಯಮದವರು ಪ್ರಸಾರ ಮಾಡಿದ್ದರು.

https://www.youtube.com/watch?v=jCr5iNUTkSs

ಈ ಕಾರಣಕ್ಕೆ ಸಿಟ್ಟಾದ ಅಣ್ಣಾಮಲೈ ತಾಳ್ಮೆ ಕಳೆದುಕೊಂಡು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ. ಪತ್ರಕರ್ತರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಎದ್ದು ಹೊರನಡೆಯಿರಿ ಎಂದು ತಾಕೀತು ಮಾಡಿದ್ದಾರೆ.

ಅಲ್ಲದೇ ಕಳಸದಲ್ಲಿ ಹಸು ಕಳ್ಳತನ ಪ್ರಕರಣಕ್ಕೆ ರಿಯಾಕ್ಷನ್ ನೀಡಲು ನಕಾರ ಮಾಡಿದ್ದು, ಅದೇನ್ ಮಾಡ್ಕೊಳ್ತೀರಾ ಮಾಡ್ಕೊಳ್ಳಿ ಎಂದು ತಾಕೀತು ಮಾಡಿದ್ದಾರೆ.

ಕಟುಕರಿಂದ ಗೋರಕ್ಷಣೆ ಮಾಡುವ ಉದ್ದೇಶದಿಂದ ಮಾಧ್ಯಮದವರು ಈ ಸುದ್ದಿಯನ್ನ ಪ್ರಸಾರ ಮಾಡಿದ್ದಕ್ಕೆ. ಉನ್ನತ ಸ್ಥಾನದಲ್ಲಿ ಕುಳಿತ ಎಸ್ಪಿ ಅಣ್ಣಾಮಲೈ ಮಾತಿನ ಅರಿವಿಲ್ಲದಂತೆ ವರ್ತಿಸಿದ್ದಾರೆ.

Next Story

RELATED STORIES