Top

ಬಿಎಂಟಿಸಿ ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ : ತಪ್ಪಿದ ಭಾರಿ ಅನಾಹುತ

ಬಿಎಂಟಿಸಿ ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ : ತಪ್ಪಿದ ಭಾರಿ ಅನಾಹುತ
X

ನೆಲಮಂಗಲ : ಬೆಂಗಳೂರು ಹೊರವಲಯದ ನೆಲಮಂಗಲದಿಂದ ಶಿವಾಜಿನಗರಕ್ಕೆ ಹೊರಟಿದ್ದ BMTC ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಉಂಟುಮಾಡಿತ್ತು.

ಚಾಲಕ ತಕ್ಷಣವೇ ಎಚ್ಚೆತ್ತುಕೊಂಡು, ಪ್ರಯಾಣಿಕರನ್ನು ಕೆಳಗಿಳಿಸಿ, ಸಮಯ ಪ್ರಜ್ಞೆ ಮೆರೆದ ಕಾರಣ, ಭಾರಿ ಅನಾಹುತ ತಪ್ಪಿರುವ ಘಟನೆ, ಮಾದಾವರ ಬಳಿ ನಡೆದಿದೆ.

ಸುಮಾರು 35 ಜನರಿಂದ ತುಂಬಿದ್ದ BMTC ಬಸ್ಸು, ನೆಲಮಂಗಲದಿಂದ ಶಿವಾಜಿನಗರದ ಕಡೆಗೆ ತೆರಳುತ್ತಿತ್ತು. ಈ ವೇಳೆ ಮಾದಾವರ ಬಳಿ ಬಂದಾಗ, ಬಸ್ಸಿನ ಇಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊಗೆ ಬರಲಾರಂಬಿಸಿದೆ.

ಬಸ್ಸಿನಲ್ಲಿದ್ದ ಶಾಲಾ ಕಾಲೇಜಿನ‌ ವಿಧ್ಯಾರ್ಥಿಗಳು, ವೃದ್ದರು ಸೇರಿಸಂತೆ 35 ಜನ ಪ್ರಯಾಣಿಕರನ್ನು ಚಾಲಕ ಸಮಯ ಪ್ರಜ್ಞೆಯಿಂದಾಗಿ ತಕ್ಷಣವೇ ಇಳಿಸಿದ್ದಾರೆ.

ಇದರಿಂದಾಗಿ ಭಾರಿ ಅನಾಹುತವೊಂದು ತಪ್ಪಿದ್ದು, ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ನವಯುವ ಟೋಲ್ ಸಿಬ್ಬಂದಿಗಳು ಯಶಸ್ವಿಯಾಗಿ ಬೆಂಕಿ ನಂದಿಸಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Next Story

RELATED STORIES